• ಹುಬ್ಬಳ್ಳಿಯಲ್ಲಿ ಖಾಕಿ ಸಿಬ್ಬಂದಿಯಿಂದ ಮಾನವೀಯತೆ
• ಚೆನ್ನಮ್ಮ ವೃತ್ತದಲ್ಲಿ ಅಸ್ವಸ್ಥ ಮಹಿಳೆಯ ರಕ್ಷಣೆ
• ಪಿ.ಎಸ್.ಐ ಚೆನ್ನಬಸಪ್ಪ ತಂಡದಿಂದ ಪ್ರಾಣರಕ್ಷಣೆ
• ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕರ ಹರ್ಷ, ಮೆಚ್ಚುಗೆ

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಹುಬ್ಬಳ್ಳಿ ಉಪ ನಗರ ಠಾಣೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಉಪ ನಗರ ಪಿ.ಎಸ್.ಐ. ಚೆನ್ನಬಸಪ್ಪ ಮತ್ತು ಇತರೆ ಸಿಬ್ಬಂದಿ ಆ್ಯಂಬುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ಮಹಿಳೆಯನ್ನು ಸಾಗಿಸಿದ್ದಾರೆ. ಕಿಮ್ಸ್ ನಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜನನಿಬಿಡ ಚೆನ್ನಮ್ಮ ವೃತ್ತದಲ್ಲಿಯೇ ಮಹಿಳೆ ರಸ್ತೆ ಮೇಲೆ ಬಿದ್ದಿದ್ದಳು. ವೃತ್ತದಲ್ಲಿ ಸಂಚರಿಸೋ ವಾಹನಗಳ ಹಾಯ್ದು ಅನಾಹುತ ಆಗಬಾರದೆಂದು ಮುನ್ನೆಚ್ಚರಿಕೆ ವಹಿಸಿದ ಸಿಬ್ಬಂದಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
