Dharwad

ಶೇ. 93 ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ದುಡ್ಡಿಯುತ್ತಿದ್ದರು ಅವರಿಗೆ ಕನಿಷ್ಠ ವೇತನ ಜಾರಿಯಾಗಿಲ್ಲ- ಮಧುಲತಾ ಗೌಡರ್.

Share

ಭಾರತದ ಆರ್ಥಿಕತೆಯಲ್ಲಿ ಶೇ. 93 ರಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆಲ್ಲ ಕನಿಷ್ಠ ವೇತನ ಸರ್ಕಾರಗಳು ನೀಡುತ್ತಿಲ್ಲ ಎಂದು ಮಧುಲತಾ ಗೌಡರ್ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಧಾರವಾಡ ನಗರದ ವಿದ್ಯಾವರ್ಧಕ ಸಂಘದಲ್ಲಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ನಡೆದ ವಿಶ್ವ ಮಹಿಳಾ ದಿನಾಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಶಾ,ಅಂಗನವಾಡಿ, ಬಿಸಿ ಊಟದಂತಹ ಸ್ಕೀಮ್ ಯೋಜನೆ ಅಡಿಯಲ್ಲಿ ಸಾವಿರಾರು ಬಡ ಹಾಗೂ ಕೆಳ ಮಧ್ಯಮ ವರ್ಗದ ಹೆಣ್ಣು ಮಕ್ಕಳು ದುಡಿಯುತ್ತಿದ್ದಾರೆ. ಇಲ್ಲಿಯವರೆಗೂ ಇವರಿಗೆ ಕನಿಷ್ಠ ವೇತನ ನೀತಿ ಜಾರಿಯಾಗಿಲ್ಲ. ಇದರ ಕುರಿತು ನಾವು ಹೋರಾಟ ಮಾಡುತ್ತಿದ್ದರು, ಸರ್ಕಾರಗಳು ಅದನ್ನು ಜಾರಿಗೆ ತರದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಶಿಕ್ಷಣ ಹಾಗೂ ಆರೋಗ್ಯವನ್ನು ಮಾರಾಟದ ವಸ್ತುವನ್ನಾಗಿ ಮಾಡಿರುವ ವ್ಯವಸ್ಥೆಯು, ಜೀವನ ನಿರ್ವಹಣೆಗಾಗಿ ಅನಿವಾರ್ಯವಾಗಿ ಮಹಿಳೆಯರನ್ನು ಸಾಲ ಮಾಡುವ ಪರಿಸ್ಥಿತಿಗೆ ದೂಡಿದೆ. ಪ್ರಜಾ ತಾಂತ್ರಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಮಹಿಳೆಯರು ಕಾರ್ಮಿಕ ವರ್ಗದ ಜೊತೆ ಸೇರಿ ಅಸ್ತಿತ್ವದಲ್ಲಿರುವ ಶೋಷಿತ ಬಂಡವಾಳಶಾಹಿ ವ್ಯವಸ್ಥೆಗೆ ಕೊನೆ ಹಾಕಬೇಕಿದೆ. ಎಲ್ಲರೂ ಪರಸ್ಪರ ಗೌರವಗಳಿಂದ ಬಾಳುವ ಹೊಸ ಸಮಾಜವನ್ನು ತರುವ ದಿಕ್ಕಿನಲ್ಲಿ ಸಾಗಬೇಕಿದೆ. ಜೊತೆಗೆ ರಾಜ್ಯ ಸರ್ಕಾರ ಕೆ ಪಿ ಎಸ್- ಮ್ಯಾಗ್ನೆಟ್ ಹೆಸರಿನಲ್ಲಿ ಬಡ ಮಕ್ಕಳು – ಹೆಣ್ಣುಮಕ್ಕಳು ಓದುವ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.

Tags:

error: Content is protected !!