ಚಿಂಚಣಿಯ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ 2026ನೇ ಸಾಲಿನ ದಾಸೋಹ ಜಾತ್ರಾ ಮಹೋತ್ಸವ ಮಾ. 9 ರಿಂದ ಮಾ. 23ರವರೆಗೆ ನಡೆಯಲಿದ್ದು, ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉತ್ತರಾಧಿಕಾರಿಗಳಾದ ಶಿವಪ್ರಸಾದ ದೇವರು ಹೇಳಿದರು.

ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ಸಿದ್ದಂಸ್ಥಾನಮಠದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ದಾಸೋಹ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಜಾತ್ರೆಯನ್ನು ಅದ್ದೂರಿ, ಅರ್ಥಪೂರ್ಣವಾಗಿಯೂ ಮಾಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಉತ್ತರಾಧಿಕಾರಿ ಶಿವಪ್ರಸಾದ ದೇವರು ನೇತೃತ್ವದಲ್ಲಿ 15 ದಿನ ದಾಸೋಹ ಜಾತ್ರೆ ನಡೆಯಲಿದೆ ಎಂದರು.
ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಮಾತನಾಡಿ ಮಾ.9ರಂದು ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಸವ ಪುರಾಣ ಪ್ರಾರಂಭವಾಗಲಿದೆ. ಮಾ. 18ರವರೆಗೆ ಬಸವ ಪುರಾಣ ಚಿಂಚಣಿ ಗ್ರಾಮದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ. ಮಾ. 19ರಂದು ಚಾಂದನಿ ಏರುವುದು, ಅಲ್ಲಮಪ್ರಭು ಜಯಂತಿ ಕಾರಂಜಿಮಠದ ಗುರುಸಿದ್ದ ಶ್ರೀಗಳ ಸಾನ್ನಿಧ್ಯಲ್ಲಿ ಜರುಗುವದು ಎಂದರು. ಮಾ.20ರಂದು ಲಿಂಗದೀಕ್ಷೆ ಅಯ್ಯಾಚಾರ, ಮಾ. 21ರಂದು ಬಸವ ಪುರಾಣ ಮಂಗಳೋತ್ಸವ, ಮಾ.23ರಂದು ಹೊಂಗಡೋತ್ಸವ, ಮಾ. 23ರಂದು 25 ಸಾವಿರ ಮುತ್ತೈದೆಯರ ಉಡಿ ತುಂಬುವುದು, ಮಹಾಪ್ರಸಾದ ಮೂಲಕ ಜಾತ್ರೆಯು ಸಂಪನ್ನಗೊಳ್ಳುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ ಭಾತೆ, ಪ್ರೋ ಎಸ್ ವೈ ಹಂಜಿ, ಅನಿಲ ಮಾನೆ, ಬಸವರಾಜ ಪಾಟೀಲ, ಅಜೇಯ ಕವಟಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
