Dharwad

ಕಾಲೇಜು ಹಂತದಿಂದಲೇ ಚುನಾವಣಾ ಪ್ರಕ್ರಿಯೆ ಬರಬೇಕು: ಸಚಿವ ಸುಧಾಕರ್.

Share

ವಿದ್ಯಾರ್ಥಿ ಚುನಾವಣೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಎಂ.ಸಿ.ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ದೇಶಕ್ಕೆ ನಾಯಕತ್ವ ಬರಬೇಕಾದರೆ ಕಾಲೇಜು ಮಟ್ಟದಿಂದಲೇ ಚುನಾವಣಾ ಪ್ರಕ್ರಿಯೆ ಬರಬೇಕು. ಇದು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿಕೊಡುತ್ತದೆ. ಕೆಲವರು ತಮ್ಮ ಅನುಕೂಲಕ್ಕೆ ಸಿದ್ಧಾಂತ ತಿರುಚುವ ಕೆಲಸ ಮಾಡಿದ್ದಾರೆ. ಈ ಹಿಂದೆ ಕಾಲೇಜು ಚುನಾವಣೆ ಮಾಡಿದವರು ಇಂದು ರಾಷ್ಟ್ರಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ನಾಯಕರಾಗಿದ್ದಾರೆ. ಗೊಂದಲ ಇಲ್ಲದೇ ಶಾಂತ ರೀತಿಯಲ್ಲಿ ಕಾಲೇಜು ಚುನಾವಣೆ ಆಗಬೇಕು ದೌರ್ಜನ್ಯ ಆಗದಂತೆ ಅವಕಾಶ ಮಾಡಿಕೊಡಬೇಕು ಎಂದರು.

Tags:

error: Content is protected !!