Belagavi

ಹೆಸ್ಕಾಂ ‘ಪವರ್ ಮ್ಯಾನ್’ಗಳಿಗೆ ಸುರಕ್ಷತಾ ಮಂತ್ರ: ಬೆಳಗಾವಿಯಲ್ಲಿ ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ಅದ್ಧೂರಿ ಚಾಲನೆ

Share

• ಬೆಳಗಾವಿಯಲ್ಲಿ ‘ಪವರ್ ಮ್ಯಾನ್’ ದಿನದ ಸಂಭ್ರಮ
• ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ಖಾದ್ರಿ ಚಾಲನೆ
• ಸುರಕ್ಷತೆಯೇ ಪವರ್ ಮ್ಯಾನ್‌ಗಳ ಮೊದಲ ಆದ್ಯತೆ
• ಹೆಸ್ಕಾಂ ಕಚೇರಿ ಆವರಣದಲ್ಲಿ ಸಸಿ ನೆಟ್ಟ ಅಧಿಕಾರಿಗಳು

ನಮ್ಮ ಮನೆಗಳನ್ನು ಬೆಳಗಲು ಜೀವದ ಹಂಗು ತೊರೆದು ಕೆಲಸ ಮಾಡುವ ಪವರ್ ಮ್ಯಾನ್‌ಗಳ ಹಿತರಕ್ಷಣೆಗಾಗಿ ಬೆಳಗಾವಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಸ್ಕಾಂ ಅಧ್ಯಕ್ಷರಾದ ಖಾದ್ರಿ ಅವರ ನೇತೃತ್ವದಲ್ಲಿ ‘ಪವರ್ ಮ್ಯಾನ್ ದಿನ’ ಹಾಗೂ ‘ವಿದ್ಯುತ್ ಸುರಕ್ಷತಾ ಸಪ್ತಾಹ’ಕ್ಕೆ ಚಾಲನೆ ನೀಡಲಾಗಿದ್ದು, ಸುರಕ್ಷತೆಯೇ ಜೀವನದ ಮಂತ್ರ ಎಂಬ ಸಂದೇಶ ಸಾರಲಾಯಿತು.
ಬೆಳಗಾವಿಯ ನಗರ ಉಪ ವಿಭಾಗ-3ರ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರದಂದು ಹೆಸ್ಕಾಂ ಅಧ್ಯಕ್ಷರಾದ ಶ್ರೀ ಖಾದ್ರಿ ಅವರ ಅಧ್ಯಕ್ಷತೆಯಲ್ಲಿ ಪವರ್ ಮ್ಯಾನ್ ದಿವಸ ಹಾಗೂ ವಿದ್ಯುತ್ ಸುರಕ್ಷತಾ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರರಾದ ಪ್ರವೀಣ ಕುಮಾರ್ ಚಿಕಡೆ ಹಾಗೂ ಅಧೀಕ್ಷಕ ಅಭಿಯಂತರರಾದ ಶಿವಾಜಿ ಖರೆ ಸೇರಿದಂತೆ ಹಿರಿಯ ಅಧಿಕಾರಿಗಳು ಜ್ಯೋತಿ ಬೆಳಗುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪರಿಸರ ರಕ್ಷಣೆಯ ಸಂಕೇತವಾಗಿ ಸಸಿಗಳನ್ನು ನೆಟ್ಟು, ಪವರ್ ಮ್ಯಾನ್‌ಗಳ ಶ್ರಮವನ್ನು ಗೌರವಿಸಲು ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಹೆಸ್ಕಾಂ ಅಧ್ಯಕ್ಷರು, ಗ್ರಾಹಕರ ಸೇವೆ ಎಷ್ಟು ಮುಖ್ಯವೋ, ಅಷ್ಟೇ ಪವರ್ ಮ್ಯಾನ್‌ಗಳ ಆರೋಗ್ಯ ಮತ್ತು ಸುರಕ್ಷತೆಯೂ ಮುಖ್ಯ ಎಂದು ಪ್ರತಿಪಾದಿಸಿದರು. ಕೆಲಸದ ಅವಧಿಯಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ, ನೌಕರರಿಗೆ ‘ಸುರಕ್ಷತಾ ಮಂತ್ರ’ವನ್ನು ಬೋಧಿಸಲಾಯಿತು. ಈ ಸಮಾರಂಭದಲ್ಲಿ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು, ನೌಕರರ ಸಂಘದ ಪದಾಧಿಕಾರಿಗಳು, ಗುತ್ತಿಗೆದಾರ ಸಂಘದ ಪ್ರತಿನಿಧಿಗಳು ಹಾಗೂ ನೂರಾರು ಪವರ್ ಮ್ಯಾನ್‌ಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Tags:

error: Content is protected !!