Belagavi

ಸಂತ ಮೀರಾ ಶಾಲೆಯಲ್ಲಿ ಪುಟಾಣಿಗಳ ಘಟಿಕೋತ್ಸವ ಸಂಭ್ರಮ ಮಕ್ಕಳು ದೇವರ ಸಮಾನ: ಹೊಡೆಯಬೇಡಿ, ಪ್ರೀತಿಯಿಂದ ಸಂಸ್ಕಾರ ನೀಡಿ – ಸತ್ಯನಾರಾಯಣ ಭಟ್ ಕರೆ

Share

• ಬೆಳಗಾವಿಯ ಸಂತ ಮೀರಾ ಶಾಲೆಯಲ್ಲಿ ಸಂಭ್ರಮ
• ಪುಟಾಣಿಗಳಿಗೆ ಪದವಿ ಪ್ರದಾನ ಮಾಡಿದ ಅತಿಥಿಗಳು
• ಶಿಕ್ಷೆಗಿಂತ ಪ್ರೀತಿಯ ಸಂಸ್ಕಾರವೇ ಮಕ್ಕಳಿಗೆ ಪಾಠ
• 130ಕ್ಕೂ ಹೆಚ್ಚು ಪಾಲಕರ ಸಮ್ಮುಖದಲ್ಲಿ ಕಾರ್ಯಕ್ರಮ

ಮಕ್ಕಳು ಅಮಾಯಕರು, ಅವರಿಗೆ ಹೊಡೆದು ಬಡಿದು ಕಲಿಸುವುದಕ್ಕಿಂತ ಪ್ರೀತಿಯಿಂದ ತಿಳಿ ಹೇಳುವುದು ಮುಖ್ಯ ಎಂದು ಸತ್ಯನಾರಾಯಣ ಭಟ್ ಅವರು ಪಾಲಕರಿಗೆ ಕಿವಿಮಾತು ಹೇಳಿದರು.

ಬೆಳಗಾವಿಯ ಅನಗೋಳನಲ್ಲಿರುವ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಭಾತ ವರ್ಗದ ಮಕ್ಕಳಿಗೆ ಪದವಿ ದಿನ, ಘಟಿಕೋತ್ಸವ ಪದವಿ ಪ್ರಮಾಣ ವಿಶೇಷ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸತ್ಯನಾರಾಯಣ ಭಟ್ ರವರು ಮತ್ತು ಜೋಷ್ನಾ ಅವರು ಉಪಸ್ಥಿತರಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ಪದವಿ ಪ್ರಮಾಣ ಪತ್ರಗಳನ್ನು ಅತಿಥಿಗಳಿಂದ ವಿತರಿಸಲಾಯಿತು.

ಮುಖ್ಯ ಅತಿಥಿಗಳಾದ ಸತ್ಯನಾರಾಯಣ ಭಟ್ ರವರು ಇದು ಅತ್ಯಂತ ಸಂತಸದ ಸಮಯ. ತಮ್ಮ ಮಕ್ಕಳ ಸಾಧನೆಯನ್ನು ಕಣ್ತುಂಬಿಕೊಳ್ಳುವುದು ಪಾಲಕರಿಗೆ ಸ್ವರ್ಗ ಸುಖ. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಲಾಲನೆ ಮಾಡಬೇಕು. ಸಣ್ಣ ಸಣ್ಣ ವಿಷಯಗಳನ್ನು ಕಲಿಸುವಾಗ ಕಿರುಕುಳ ನೀಡುವುದು ಹೊಡೆಯುವುದು ಸರಿಯಲ್ಲ. ಮಕ್ಕಳು ದೇವರು ಸಮಾನ. ಮಕ್ಕಳು ಅಮಾಯಕರಾಗಿರುತ್ತಾರೆ. ಮಕ್ಕಳಿಗೆ ನೋವಾಗುವಂತೆ ಹೊಡೆಯದೇ, ತಿಳಿ ಹೇಳುವ ಕೆಲಸವನ್ನು ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾದ ಜ್ಯೋತ್ಸ್ನಾ ಅವರು ಮಕ್ಕಳಿಗೆ ಶಾಲೆಯಲ್ಲಿ ನೀಡಿದ ಶಿಸ್ತು ಮತ್ತು ಮನೆಯಲ್ಲಿ ನೀಡಿದ ಸಂಸ್ಕಾರವನ್ನು ನೋಡಿ ಸಂತಸವೆನಿಸುತ್ತಿದೆ. ಮಕ್ಕಳ ಶಿಕ್ಷಣ ಬುನಾದಿ ಅತ್ಯಂತ ಗಟ್ಟಿಯಾಗಿರಬೇಕು. ಶಿಕ್ಷಕರು ಮತ್ತು ಪಾಲಕರು ಮಕ್ಕಳ ಶಿಕ್ಷಣದ ಬೇರನ್ನು ಅತ್ಯಂತ ಗಟ್ಟಿಯಾಗಿಬೇಕು. ಶಿಸ್ತನ್ನು ಭಯದಿಂದಲ್ಲ. ಪ್ರೀತಿಯೊಂದಿಗೆ ಮಕ್ಕಳಿಗೆ ಕಲಿಸಬೇಕು. ಮಕ್ಕಳಿಗೆ ನೀತಿ ಕಥೆಗಳು ಪಾಠವಾಗಬೇಕು.

ಶಾಲೆಯ ಅಧ್ಯಕ್ಷರಾದ ಪರಮೇಶ್ವರ್ ಹೆಗಡೆ ಅವರು ಮನೆಯೇ ಮೊದಲ ಪಾಠ ಶಾಲೆ. ಜನನಿಯೇ ಮೊದಲ ಶಿಕ್ಷಕಿ. ಮೊದಲಿದ್ದ ಈ ವಾತಾವರಣ ಸ್ವರ್ಗಕ್ಕೆ ಸಮಾನವಾಗಿತ್ತು. ಆದರೇ ಆಧುನಿಕ ಯುಗದಲ್ಲಿ ರಾಮಾಯಣ ಮಹಾಭಾರತ ಸೇರಿದಂತೆ ಸಣ್ಣ ಸಣ್ಣ ವಿಷಯಗಳನ್ನು ಕಲಿಸಲು ಸಮಯವಿರುವುದಿಲ್ಲ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯಬೇಕು. ಚಿಕ್ಕ ಮಕ್ಕಳಿಗೆ ಪ್ರಮಾಣಪತ್ರವನ್ನು ನೀಡಿ ಅವರ ಸಾಧನೆ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಪರಿಣಾಮಕಾರವಾಗಿದೆ ಎಂದರು.

ಶಾಲೆಯ ಆಡಳಿತ ಅಧಿಕಾರಿಗಳಾದ ರಾಘವೇಂದ್ರ ಕುಲಕರ್ಣಿ ಅವರು ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಸುಜಾತಾ ದಫತರದಾರ ಅವರು ಹಾಗೂ ಶಿಶುವಾಟಿಕ ಪ್ರಮುಖರಾದ ಆಶಾ ಅವರು ಉಪಸ್ಥಿತರಿದ್ಧರು. ಕಾರ್ಯಕ್ರಮಕ್ಕೆ ಸುಮಾರು 130 ರಷ್ಟು ಪಾಲಕರು ಭಾಗವಹಿಸಿದ್ದರು. ಇದೇ ವೇಳೆ ಅರುಣ ಮತ್ತು ಉದಯ ವರ್ಗದ ಮಕ್ಕಳಿಂದ ಪ್ರಭಾತ ವರ್ಗ ದ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಬಿಳ್ಕೊಡುಗೆ ಕಾರ್ಯಕ್ರಮ ವನ್ನು ಮಾಡಿಸಲಾಯಿತು.

Tags:

error: Content is protected !!