State

ಒಳ ಮೀಸಲಾತಿ ಗೊಂದಲಕ್ಕೆ ಶೀಘ್ರವೇ ತೆರೆ: ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಚರ್ಚೆ – ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟನೆ

Share

ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಒಳ ಮೀಸಲಾತಿ ಜಾರಿ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಇಂದು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ವರ್ಗೀಕರಣದ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಗೊಂದಲಗಳನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಈ ವಿಷಯವನ್ನು ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಅವರು ತಿಳಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಈಗಾಗಲೇ ಒಳ ಮೀಸಲಾತಿ ಜಾರಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರಲ್ಲಿರುವ ವರ್ಗಿಕರಣದ ಸಮಸ್ಯೆಗಳಿಂದ ಗೊಂದಲಗಳು ನಿರ್ಮಾಣವಾಗಿದ್ದು, ಅವುಗಳನ್ನು ನಿವಾರಿಸಲು ಮತ್ತೇ ಸಂಪುಟಕ್ಕೆ ವಿಷಯವನ್ನು ತಂದು ಸಿಎಂ ಚರ್ಚಿಸಲು ತರಲಿದ್ದಾರೆ. ನ್ಯಾಯಾಲಯವು ಶೇ. 50ಕ್ಕಿಂತ ಹೆಚ್ಚು ನೀಡಲು ಬರುವುದಿಲ್ಲವೆಂದು ನಿಯಮವಿದೆ ಎಂದರು.

ಇನ್ನು ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಸಂಪುಟದಲ್ಲಿ ಈ ಕುರಿತು ತಿಳಿಸುತ್ತಾರೆ. ಅಂತಿಮವಾಗಿ ಒಂದು ನಿರ್ಣಯಕ್ಕೆ ಬರುತ್ತಾರೆ. ಹೊರಗೆ ಬಂದಾಗ ಅವರು ತಮ್ಮ ಅಭಿಪ್ರಾಯ ಹೇಳಬಹುದು. ಗೃಹ ಇಲಾಖೆಯ ಮೀಸಲಾತಿ ಬಗ್ಗೆ ನೇಮಕಾತಿಯ ಬಗ್ಗೆ ತಿರ್ಮಾಣಿಸುತ್ತಾರೆ. ಯಾವುದೇ ಇಲಾಖೆಗೂ ಮೀಸಲಾತಿಯಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.

Tags:

error: Content is protected !!