BELAGAVI

ಬೆಳಗಾವಿಯಲ್ಲಿ ದಿವ್ಯಾಂಗರ ಬೃಹತ್ ಪ್ರತಿಭಟನೆ: ‘ನಮಗೆ ಅನುಕಂಪ ಬೇಡ, ಅವಕಾಶ ಬೇಕು’ – ಸರ್ಕಾರಕ್ಕೆ ವಿಕಲಚೇತನರ ಎಚ್ಚರಿಕೆ!

Share

ರಾಜ್ಯ ಬಜೆಟ್ ಅಧಿವೇಶನದ ಬೆನ್ನಲ್ಲೇ ಬೆಳಗಾವಿಯಲ್ಲಿ ವಿಕಲಚೇತನರು ತಮ್ಮ ಹಕ್ಕುಗಳಿಗಾಗಿ ರಣಕಹಳೆ ಮೊಳಗಿಸಿದ್ದಾರೆ. ಲೋಕಪ್ರಿಯ ಜನಸೇವಾ ಸಂಘ ಹಾಗೂ ವಿವಿಧ ವಿಕಲಚೇತನರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುಂದೆ ಪ್ರತಿಭಟಿಸಿದ ನೂರಾರು ದಿವ್ಯಾಂಗರು, ಸರ್ಕಾರಕ್ಕೆ ಹಕ್ಕೊತ್ತಾಯದ ಮನವಿ ಸಲ್ಲಿಸಿದರು. ಮಾಸಾಶನ ಹೆಚ್ಚಳ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಅವರು ಆಗ್ರಹಿಸಿದ್ದಾರೆ.

ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ವಿಕಲಚೇತನರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

ನಾಳೆಯಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಅಂಗವೀಕಲರ ಮಾಸಾಶನವನ್ನು 6 ಸಾವಿರ ರೂಪಾಯಿಯ ವರೆಗೆ ಹೆಚ್ಚಿಸಬೇಕು. ಶಕ್ತಿ ಯೋಜನೆಯಡಿ ವಿಕಲಾಂಗರಿಗೆ ವಿಶೇಷ ಸೌಲಭ್ಯ ಕಲ್ಪಿಸಬೇಕು. ವಿಕಲಾಂಗರಿಗೆ ಪ್ರತ್ಯೇಕ ಬಿ.ಪಿ.ಎಲ್ ಕಾರ್ಡ್ ನೀಡಬೇಕು. ಶೇಕಡಾ 5 ರಷ್ಟು ಇರುವ ಅನುದಾನದಲ್ಲಿ ದಿವ್ಯಾಂಗ ಭವನಕ್ಕಾಗಿ ಉಪಯೋಗಿಸಬೇಕು. ವಿಕಲಾಂಗರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಮಂಡಿಸಲು ಧ್ವನಿಯಾಗುವಂತೆ ದಿವ್ಯಾಂಗರಿಗೆ ಒಂದು ಶಾಸಕ ಸ್ಥಾನವನ್ನು ನೀಡಬೇಕೆಂದು ಯಲ್ಲಪ್ಪಾ ಬಾಂದಿವಡೇಕರ ಆಗ್ರಹಿಸಿದರು.

ಮಹಾಂತೇಶ್ ಹೊಂಗಲ್ ಅವರು ಕರ್ನಾಟಕದಲ್ಲಿ ಅತ್ಯಂತ ತುಳಿಯಲ್ಪಟ್ಟ ವರ್ಗ ದಿವ್ಯಾಂಗರಾಗಿದ್ದಾರೆ. ನಮಗೆ ಕರುಣೆ, ಅನುಕಂಪ ಬೇಡ, ಅವಕಾಶ ಬೇಕು. ಎಲ್ಲ ಚುನಾವಣೆಗಳಲ್ಲಿ ಮತದಾನ ಮಾಡಿಸಿಕೊಳ್ಳುವ ಸರ್ಕಾರಗಳು ಸರಿಯಾಗಿ ಸೌಲಭ್ಯಗಳನ್ನು ನೀಡುತ್ತಿಲ್ಲ. ನಮ್ಮ ಹುಟ್ಟೆ ನಮಗೆ ಶಾಪವಾಗಿದಂತಾಗಿದೆ. ದಿವ್ಯಾಂಗರಿಗೆ ದೇವರ ಮಕ್ಕಳು ಎನ್ನುವ ಪಿಎಂ ಮೋದಿ ನಮಗೂ ಎಸ್ ಸಿ. ಎಸ್.ಟಿ ಮಾದರಿಯಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಿ ಎಂದರು.

ಈ ಸಂದರ್ಭದಲ್ಲಿ ನೂರಾರು ದಿವ್ಯಾಂಗರು ಭಾಗಿಯಾಗಿದ್ಧರು.

Tags:

error: Content is protected !!