BELAGAVI

ಕಣಬರ್ಗಿ ಸಿದ್ಧೇಶ್ವರ ದೇವಸ್ಥಾನದಲ್ಲಿ ಅನುಮಾನಾಸ್ಪದ ಕಾರು: 12 ದಿನಗಳಿಂದ ಒಂದೇ ಕಡೆ ವಾಸ್ತವ್ಯ; ಗ್ರಾಮಸ್ಥರಲ್ಲಿ ಆತಂಕ!

Share

ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ಪ್ರಸಿದ್ಧ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕಳೆದ 10 ರಿಂದ 12 ದಿನಗಳಿಂದ ಬಿಳಿ ಬಣ್ಣದ ಮಹಾರಾಷ್ಟ್ರ ಪಾಸಿಂಗ್ (MH) ಕಾರೊಂದು ಅನುಮಾನಾಸ್ಪದವಾಗಿ ನಿಂತಿದೆ. ಈ ಕಾರು ಯಾರಿಗೆ ಸೇರಿದ್ದು? ಇಲ್ಲಿಗೆ ಹೇಗೆ ಬಂತು? ಎಂಬ ಬಗ್ಗೆ ಯಾರಿಗೂ ಸುಳಿವು ಇಲ್ಲದಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ದೇವಸ್ಥಾನದ ಪವಿತ್ರ ಆವರಣದಲ್ಲಿ ಇಷ್ಟು ದಿನಗಳ ಕಾಲ ಅಪರಿಚಿತ ವಾಹನ ನಿಂತಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಈ ವಾಹನದಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರನ್ನು ವಶಕ್ಕೆ ಪಡೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಾಹನದ ಮಾಲೀಕರನ್ನು ಪತ್ತೆ ಹಚ್ಚಿ, ದೇವಸ್ಥಾನದ ಆವರಣದ ಜಾಗವನ್ನು ಮುಕ್ತಗೊಳಿಸಬೇಕು ಹಾಗೂ ಗ್ರಾಮದ ಸುರಕ್ಷತೆಯ ದೃಷ್ಟಿಯಿಂದ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ.

Tags:

error: Content is protected !!