ಪೇಡಾ ನಗರಿ ಧಾರವಾಡದಲ್ಲಿ ಗಲ್ಲಿ ಗಲ್ಲಿಯುಲ್ಲೂ ಇಂದು ಹೋಳಿ ಹಬ್ಬದ ಸಂಭ್ರಮ ಜೋರಾಗಿತ್ತು. ಸಂಪ್ರದಾಯದಂತೆ ಕಾಮಣ್ಣ ಮೂರ್ತಿ ದಹಿಸಿದ ನಂತರ ಎಲ್ಲರೂ ಪರಸ್ಪರ ಬಣ್ಣ ಹಚ್ಚಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಬಳಿಕ ರೆನ್ ಡ್ಯಾನ್ನಲ್ಲಿ ಡಿಜ್ಜೆ ಹಾಡಿಗೆ ಸಖತಾಗಿ ಯುವ ಸಮುದಾಯ ಹೆಜ್ಜೆ ಹಾಕಿತ್ತು.

ವೈ- ನಗರದ ಕೆಸಿಡಿ ವೃತದಲ್ಲಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳ ವತಿಯಿಂದ ಹೋಳಿ ಹುಣ್ಣಿಮೆಯ ಪ್ರಯುಕ್ತವಾಗಿ ಗಡಿಗೆ ಒಡೆಯುವ ಸ್ಪರ್ಧೆಯ ಜೆತೆಗೆ ರೆನ್ ಡ್ಯಾನ್ಸ್ ಡಿಜೆ ಆಯೋಜನೆ ಮಾಡಲಾಗಿತ್ತು. ಗಲ್ಲಿ ಗಲ್ಲಿಯಲ್ಲಿ ಕಾಮಣ್ಣದೇವರ ದಹನದ ಬಳಿಕ ರೆನ್ ಡ್ಯಾನ್ಸ ಕಡೆ ಹೆಜ್ಕೆ ಹಾಕಿದ ಯುವ ಸಮುದಾಯ ಡಿಜೆಗೆ ಭರ್ಜರಿ ಹೆಜ್ಜೆ ಹಾಕಿದ್ದರು. ಕೆಸಿಡಿ ವೃತ್ತದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ರೆನ್ ಡ್ಯಾನ್ಸ್ ಆಯೋಜನೆ ಮಾಡಲಾಗಿದ್ದು, ಯುವತಿಯರು ಬಣ್ಣದೋಕುಳ್ಳಿಯಲ್ಲಿ ಮಿಂದೆದ್ದರು. ಗಡಿಗೆ ಒಡೆಯಲು ಗಂಡು ಹೈಕ್ಳು ಸುಸ್ತಾಗಿ ಹೋದರು. ಒಟ್ಟಿನಲ್ಲಿ ಪೇಡಾ ನಗರಿಯಲ್ಲಿಂದ ಬಣ್ಣದುಕುಳ್ಳಿ ಜೋರಾಗಿದ್ದು, ಯಾವುದೆದ ಅಹಿತಕರ ಘಡನೆ ನಡೆಯದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಳ್ಳಾಗಿದೆ.
