hubbali

ರೌಡಿ ಶೀಟರ್ನಿಂದ ಕುಡಿದ ಮತ್ತಿನಲ್ಲಿ ಸ್ನೇಹಿತನಿಗೆ ಚಾಕು ಇರಿತ..!!

Share

ಕುಡಿದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಮೇಲೆಯೇ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯ ನವನಗರದಲ್ಲಿ ನಡೆದಿದೆ.  ಆರೋಪಿ ಆರಿಫ್ ನದಾಫ ಎಂಬ ವ್ಯಕ್ತಿ ಮದ್ಯಪಾನ ಮಾಡಿ ಜೊತೆಗೆ ಇದ್ದ ಸ್ನೇಹಿತರರಿಗೆ ಧಮ್ಕಿ ಹಾಕಿ ಹಲ್ಲೆ ಮಾಡಲು ಮುಂದಾಗಿದ್ದಾನೆ, ಇದನ್ನು ಗಮನಿಸಿದ ಸ್ನೇಹಿತ ರಾಜು ನಾಯಕ್ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದು ಬುದ್ಧಿಮಾತು ಹೇಳಿದ್ದಾನೆ.

ಇದಕ್ಕೆ ಕೋಪಗೊಂಡ ಆರೋಪಿ “ಅದನ್ನು ಕೇಳಲು ನೀನ್ಯಾರು” ನಿನ್ನನು ಸುಮ್ಮನೆ ಬಿಡಲ್ಲ ಎಂದು ಥಳಿಸಿ, ಕೈಯಲ್ಲಿದ್ದ ಹರಿತವಾದ ವಸ್ತುವಿನಿಂದ ರಾಜುವಿನ ಕುತ್ತಿಗೆ ಹಾಗೂ ಕೈ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಜು, ಆರೋಪಿ ಆರಿಫ್ ನಿಂದ ತಪ್ಪಿಸಿಕೊಂಡು, ತನ್ನ ಸ್ನೇಹಿತರ ಸಹಾಯದಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾನೆ.

ಈ ಘಟನೆ ಎಪಿಎಂಸಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಆರಿಫ್ ನನ್ನು ಕೊಲೆ ಯತ್ನದ ಪ್ರಕರಣದಲ್ಲಿ ಜೈಲಿಗೆ ಅಟ್ಟಿದ್ದಾರೆ.

Tags:

error: Content is protected !!