Dharwad

ಧಾರವಾಡದ ಗುಲಗಂಜಿಕೊಪ್ಪದಲ್ಲಿ ಸಂಭ್ರಮದ ಹೋಳಿ….

Share

ಪೇಡಾ ನಗರಿ ಧಾರವಾಡದಲ್ಲಿ ಹೋಳಿ ಹಬ್ಬದ ಸಂಭ್ರಮ ಜೋರಾಗಿದೆ. ಹೋಳಿ ಹುಣ್ಣಿಮೆ ಹಬ್ಬದ ಪ್ರಯುಕ್ತ ಗುಲಗಂಜಿಕೊಪ್ಪದಲ್ಲಿ ಕಾಮಣ್ಣನ ಮೂರ್ತಿ ದಹಿಸಿ, ಜನರು ಬಣ್ಣದಲ್ಲಿ‌ ಮಿಂದೆದ್ದರು.

ಸಾಂಪ್ರದಾಯಿಕ ಪದ್ಧತಿಯಂತೆ ಹಲಿಗೆ ಬಾರಿಸುತ್ತಾ, ಸಕಲ ವಾದ್ಯ ಬಾರಿಸುವ ಮೂಲಕ ನೈವೇದ್ಯ ತಂದು ಕಾಮಣ್ಣ ದೇವರಿಗೆ ಅರ್ಪಿಸಿ, ಜೈಕಾರ ಹಾಕಿ, ಕಾಮಣ್ಣನ ಮೂರ್ತಿ ಸುತ್ತಲೂ ಕುಳ್ಳು, ಕಟ್ಟಿಗೆ ಒಟ್ಟಿ ಕಾಮಣ್ಣನ ಮೂರ್ತಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಕಾಮಣ್ಣನಿಗೆ ಅಗ್ನಿ ಸ್ಪರ್ಶವಾಗುತ್ತಿದ್ದಂತೆ ಗುಲಗಂಜಿಕೊಪ್ಪದ ಯುವ ಸಮುದಾಯ ಸೇರಿದಂತೆ ಚಿಕ್ಕಮಕ್ಕಳೆಲ್ಲರು ಬಣ್ಣದೋಕುಳ್ಳಿಯಲ್ಲಿ ಸಂಭ್ರಮಿಸಿದರು.‌ ಇನ್ನೂ ಧಾರವಾಡದಲ್ಲಿ ಇಂದು ಬಹುತೇಕ ಬಣ್ಣದೋಕುಳ್ಳಿ ನಡೆಯಿತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಪೊಲೀಸ್ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿದೆ.‌

Tags:

error: Content is protected !!