Hukkeri

ಹುಕ್ಕೇರಿ : ಲಕ್ಷ್ಮಿ ಜಾತ್ರೆಯಲ್ಲಿ ಬ್ಯಾನರ್’ಗಳಿಂದ ತೊಂದರೆಯಾಗದಿರಲಿ – ಬಾಪು ನಾಯಿಕ

Share

ಹುಕ್ಕೇರಿ ನಗರದಲ್ಲಿ ಮಾರ್ಚ 10 ರಿಂದ ಆರಂಭವಾಗಲಿರುವ ಗ್ರಾಮ ದೇವತೆ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ಅಳವಡಿಸುವ ಬ್ಯಾನರಗಳಿಂದ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಜಾಗ್ರತೆ ವಹಿಸ ಬೇಕು ಎಂದು ಜಾತ್ರಾ ಕಮಿಟಿ ಅದ್ಯಕ್ಷ ಬಾಪು ನಾಯಿಕ ಹೇಳಿದರು.

ಹುಕ್ಕೇರಿ ನಗರದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಶ್ರೀ ಲಕ್ಷ್ಮಿ ದೇವಿ ಜಾತ್ರೆ ಮಾರ್ಚ 10 ರಿಂದ 14 ರ ವರಗೆ ಜರುಗಲಿದೆ ಆದರೆ ಇಗಾಗಲೆ ನಗರ ತುಂಬೆಲ್ಲಾ ಬ್ಯಾನರಗಳ ಭರಾಟೆ ಜೋರಾಗಿ ನಡೆದಿದೆ ನಗರದ ಮುಖ್ಯ ರಸ್ತೆ, ಅಂಗಡಿ ಮುಗ್ಗಟ್ಟುಗಳ ಮೇಲೆ, ಗಲ್ಲಿ ಗಲ್ಲಿಗಳಲ್ಲಿ ಯುವಕರ ಬ್ಯಾನರಗಳ ಅಳವಡಿಕೆ ಜೋರಾಗಿ ನಡೆದಿದೆ ಆದರೆ ಕೆಲ ಸ್ಥಳಗಳಲ್ಲಿ ಬ್ಯಾನರ ಅಳವಡಿಕೆ ಕುರಿತು ಸಣ್ಣ ಪುಟ್ಟ ಗಲಾಟೆಗಳು ಸಹ ನಡೆದಿವೆ, ಕೆಲ ಯುವಕರು ಸ್ಪರ್ಧಾತ್ಮಕವಾಗಿ ಬ್ಯಾನರ ಅಳವಡಿಕೆಯಲ್ಲಿ ಮುಂಚುನಣೆಯಲ್ಲಿದ್ದಾರೆ,
ಪಟ್ಟಣದ ಕೋರ್ಟ ಸರ್ಕಲ್, ನಾಕಾ ನಂಬರ ಒನ್, ಹೋಸ ಬಸ್ ನಿಲ್ದಾಣ, ಅಡವಿ ಸಿದ್ದೇಶ್ವರ ಮಠ, ಹಳೆ ಬಸ್ ನಿಲ್ದಾಣ ,ಬಝಾರ ರಸ್ತೆ, ಬೈ ಪಾಸ್ ರಸ್ತೆ, ತುರಬಂಧಿ ಸೇರಿದಂತೆ ನಗರದ ಉದ್ದಗಲಕ್ಕೂ ಬ್ಯಾನರ ಅಳವಡಿಸಲಾಗಿದೆ .

ಈ ಕುರಿತು ಜಾತ್ರಾ ಕಮಿಟಿ ಅದ್ಯಕ್ಷರಾದ ಬಾಪು ನಾಯಿಕ ಮಾದ್ಯಮಗಳೊಂದಿಗೆ ಮಾತನಾಡಿ ನಗರದ ಜಾತ್ರೆ ಅಂಗವಾಗಿ ಬ್ಯಾನರಗಳನ್ನು ಅಳವಡಿಸಲಾಗುತ್ತಿದೆ ಆದರೆ ಕಾನೂನು ಸುವ್ಯವಸ್ಥೆ ಮನಗೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ,ಸಿ ಸಿ ಕ್ಯಾಮರಾಗಳಿಗೆ ಅಡ್ಡಲಾಗಿ ಮತ್ತು ಒತ್ತಾಯ ಪೂರ್ವಕವಾಗಿ ಇನ್ನೂಬ್ಬರ ಸ್ಥಳದಲ್ಲಿ , ಅಂಗಡಿ ಕಾರರಿಗೆ ತೊಂದರೆಯಾಗದಂತೆ ನಗರ ಸೌಂದರ್ಯ ಹಾಳಾಗದಂತೆ ಬ್ಯಾನರ ಅಳವಡಿಸಬೇಕು ಎಂದರು
ಹಕ್ಕುದಾರರಾದ ರಾಜೇಶ ಕುಲಕರ್ಣಿ ಮಾತನಾಡಿ ಕೋಮು ಸೌಹಾರ್ದತೆಗೆ ಹೆಸರಾದ ಹುಕ್ಕೇರಿ ನಗರದಲ್ಲಿ ಪ್ರತಿ ಮೂರು ವರ್ಷಕ್ಕೋಮ್ಮೆ ಜರಗುವ ಲಕ್ಷ್ಮಿ ದೇವಿ ಜಾತ್ರೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿ ಜಾತ್ರೆಯನ್ನು ವಿಬೃಂಜನೆಯಿಂದ ಆಚರಿಸಲಾಗುವದು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸಕಲ ಮೂಲ ಭೂತ ಸೌಲಭ್ಯ ವದಗಿಸಲಾಗಿದೆ ಐದು ದಿನ ಜರಗುವ ಜಾತ್ರೆಯಲ್ಲಿ ಸಾಮರಸ್ಯ ಕಂಡು ಬರಲಿದೆ ಎಂದರು

ಈ ಸಂದರ್ಭದಲ್ಲಿ ಅಜೀತ ಚೌಗಲಾ, ಸಂತೋಷ ಮತ್ತಿಕೊಪ್ಪ, ರಾಜು ಚೌಗಲಾ, ಗುರು ಕುಲಕರ್ಣಿ, ರಾಜು ಪವಾರ, ಮೊದಲಾದವರು ಉಪಸ್ಥಿತರಿದ್ದರು.
ಹುಕ್ಕೇರಿ ನಗರದಲ್ಲಿ ಲಕ್ಷ್ಮಿ ದೇವಿ ಜಾತ್ರೆ ಇನ್ನೂ 10 ದಿನ ಬಾಕಿ ಇರುವಾಗಲೇ ಬ್ಯಾನರ ಅಳವಡಿಕೆಯಲ್ಲಿ ಕೆಲ ಯುವಕರು ಪೈಪೋಟಿ ಮಾಡುವದು ಮತ್ತು ತಮ್ಮ ಬೆಂಬಲಿಗರನ್ನು ಪ್ರದರ್ಶಿಸುವ ಮೂಲಕ ಸ್ವಾಗತ ಬ್ಯಾನರಗಳನ್ನು ಅಳವಡಿಸುವದನ್ನು ನೋಡಿದರೆ ಇದು ಮುಂಬರುವ ಪುರಸಭೆ ಚುನಾವಣೆಯ ತಯಾರಿ ಇರಬಹುದು ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

Tags:

error: Content is protected !!