ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಇಂದು ಬಂಜಾರಾ ಸಮಾಜದ ಭವನ ನಿರ್ಮಾಣಕ್ಕೆ ಜಾಗ ನೀಡುವ ವಿಚಾರ ಗಂಭೀರ ಚರ್ಚೆಗೆ ಗ್ರಾಸವಾಯಿತು. ಇದರೊಂದಿಗೆ ಕಟ್ಟಡಗಳ ಕಾಮಗಾರಿ ಮುಕ್ತಾಯಕ್ಕೂ ಮುನ್ನವೇ ಪಿಐಡಿ ಶುಲ್ಕ ವಸೂಲಿ ಮಾಡುತ್ತಿರುವ ಅಧಿಕಾರಿಗಳ ನಡೆಯನ್ನು ಸದಸ್ಯರು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಪರಿಷತ್ತಿನ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ನಗರಸೇವಕಿ ಲಕ್ಷ್ಮೀ ರಾಠೋಡ್ ಅವರು ಬೆಳಗಾವಿಯ ಡಾ. ಬಾಬು ಜಗಜೀವನರಾಮ್ ವಿದ್ಯಾರ್ಥಿ ವಸತಿ ನಿಲಯದ ಬಳಿ ಕಳೆದ ಬಾರಿ ಮಹಾನಗರ ಪಾಲಿಕೆಯ ಸರ್ವೆ ನಂ 42 ರ 14 ಗುಂಟೆ ಜಾಗೆಯಲ್ಲಿ ತಾಂಡಾ ಅಭಿವೃದ್ಧಿ ನಿಗಮದಿಂದ ಜಿಲ್ಲಾ ಬಂಜಾರಾ ಭವನ ನಿರ್ಮಿಸಲು ಮಂಜೂರಾತಿ ನೀಡಿದ ಹಿನ್ನೆಲೆ ಕಳೆದ ಬಾರಿ ಮಾಜಿ ಶಾಸಕ ಅನೀಲ ಬೆನಕೆ ಭೂಮಿ ಪೂಜೆ ಸಲ್ಲಿಸಿದ್ದರು. ಆದರೇ, ಅದರ ಬದಲಿಗೆ ಬೇರೆಯ ಜಾಗೆಯನ್ನು ನೀಡುವುದಾಗಿ ಮಹಾನಗರ ಪಾಲಿಕೆ ಹೇಳಿತ್ತು. ಆದರೇ ಯಾಕೆ ನೀಡಿಲ್ಲವೆಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ಶಾಸಕ ಆಸೀಫ್ ಸೇಠ್ ಅವರು ಒಂದು ವೇಳೆ ಪರ್ಯಾಯ ಖುಲ್ಲಾ ಜಾಗೆಯಿದ್ದರೇ, ಭವನ ನಿರ್ಮಿಸಲು ಯಾವುದೇ ತೊಂದರೆಯಿಲ್ಲ ಎಂದರು.
ಇದಕ್ಕೆ ಆಡಳಿತಪಕ್ಷದ ನಾಯಕ ಹಣುಮಂತ ಕೊಂಗಾಲಿ ಅವರು ಬಂಜಾರಾ ಸಮಾಜದಿಂದ ಬಂಜಾರಾ ಭವನ ನಿರ್ಮಿಸುವುದಾಗಿ ನಿಗಮವು ಹೇಳಿದೆ. ಆದ್ದರಿಂದ ಪರ್ಯಾಯ ಜಾಗೆಯನ್ನು ಆದಷ್ಟು ಬೇಗ ಮಹಾನಗರ ಪಾಲಿಕೆ ಪರಭಾರೆ ಮಾಡಿಕೊಳ್ಳಲಿ ಎಂದರು.
ಕಟ್ಟಡ ಕಾಮಗಾರಿ ಮುಕ್ತಾಯ ಪ್ರಮಾಣಪತ್ರ ಪಡೆಯದೇ ಪಿಐಡಿ ನೀಡಲು ಯಾವ ಆಧಾರದ ಮೇಲೆ ಯಾವ ಆಧಾರದ ಮೇಲೆ ಶುಲ್ಕವನ್ನು ಪಡೆಯಲಾಗುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯ ದಿನೇಶ್ ನಾಶಿಪುಡಿ ಅವರು ಪ್ರಶ್ನಿಸಿದರು. ಅಲ್ಲದೇ ನೀರಿನ ಶುಲ್ಕವನ್ನು ಎಲ್. ಆಂಡ್ ಟಿ ಗೆ ನೀಡಿ, ಹೆಸ್ಕಾಂಗೆ ಭರಿಸುವ ಬಿಲ್ ಮಹಾನಗರ ಪಾಲಿಕೆಗೆ ಬರಲಿ ಎಂದರು.
