BELAGAVI

ಮಹಾಪಾಲಿಕೆ ಸಭೆಯಲ್ಲಿ ಜನನ-ಮರಣ ಪ್ರಮಾಣಪತ್ರಗಳ ವಿಳಂಬಕ್ಕೆ ಆಕ್ರೋಶ

Share

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಾಮಾನ್ಯ ಸಭೆಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಪಡುತ್ತಿರುವ ಹೈರಾಣಿನ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಏಜೆಂಟರ ಹಾವಳಿ ಮತ್ತು ತಾಂತ್ರಿಕ ದೋಷಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಶಾಸಕರು ಹಾಗೂ ನಗರಸೇವಕರು ಸಭೆಯ ಗಮನಕ್ಕೆ ತಂದರು.

ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಪರಿಷತ್ತಿನ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಉತ್ತರ ಶಾಸಕ ಆಸೀಫ್ ಸೇಠ್ ಅವರು ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಸಂಬಂಧಿದಂತೆ ಹೆಚ್ಚುತ್ತಿರುವ ಏಜೆಂಟರ ಹಾವಳಿಯನ್ನು ತಪ್ಪಿಸಬೇಕೆಂದರು.

ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮತ್ತು ಶಾಸಕ ಅಭಯ್ ಪಾಟೀಲ್ ಅವರು ಪ್ರಮಾಣಪತ್ರ ವಿತರಣೆಗೆ ಸ್ವೀಕರಿಸುವ ದಾಖಲಾತಿಗಳ ಮಾಹಿತಿಯನ್ನು ಕೇಳಿದರು. ಅಲ್ಲದೇ ಕಾನೂನುಬದ್ಧ ದಾಖಲಾತಿಗಳನ್ನು ಸ್ವೀಕರಿಸುವ ಸಲಹೆಯನ್ನು ನೀಡಿದರು.

ನಗರಸೇವಕ ರವಿ ಸಾಳುಂಕೆ ಅವರು ಜನನ ಮರಣ ಪ್ರಮಾಣ ಪತ್ರಕ್ಕೆ 70 ರೂಪಾಯಿ ಪ್ರತಿ ಹಣ ಪಡೆಯಲಾಗುತ್ತಿದೆ. ಅಲ್ಲದೇ ಹಳೆಯ ಕಂಪ್ಯೂಟರ್ ಮತ್ತು ಹಳೆಯ ತಂತ್ರಾಂಶಗಳಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದನ್ನ ಬದಲಿಸಬೇಕು ಮತ್ತು ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಇದಕ್ಕೆ ಮಹಾಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ., ಅವರು ಈಗ ಜನನ ಪ್ರಮಾಣಪತ್ರದ ಅರ್ಜಿ ಸ್ವೀಕೃತಿಗೊಂಡ ಬಳಿಕ ಪ್ರಮಾಣ ಪತ್ರವನ್ನು ಪೋಸ್ಟಲ್ ಸೇವೆ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದರು. ಅಲ್ಲದೇ ಜನರಿಗೆ ತೊಂದರೆಯಾಗದಂತೆ ಜನಪರ ಸೇವೆಗಳನ್ನು ಸುಧಾರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.

Tags:

error: Content is protected !!