ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯಗಳ ‘ಹೈಟೆಕ್ ಡಿಲೈಟ್’ ಲಾಡ್ಜಿಂಗ್ ಮತ್ತು ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್’ನ್ನು ರವಿವಾರ ಸಂಜೆ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.


ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಹೈಟೆಕ್ ಸಮೂಹದ ಈ ಹೊಸ ಉದ್ಯೋಗಕ್ಕೆ ಚಾಲನೆಯನ್ನು ನೀಡಿದರು.
ಕಳೆದ 15 ವರ್ಷಗಳಿಂದ ಅಡ್ವರ್ಟೈಸರ್ಸ್, ಆಟೋಮೊಬೈಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೈಟೆಕ್ ಸಮೂಹವು, ಈಗ ಆತಿಥ್ಯ ಕ್ಷೇತ್ರಕ್ಕೆ ಕಾಲಿಟ್ಟಿರುವುದು ವಿಶೇಷವಾಗಿದೆ. ಇಲ್ಲಿನ ವಿಶಾಲವಾದ ಕೊಠಡಿಗಳು ಅತ್ಯಾಧುನಿಕ ಸೌಲಭ್ಯಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇಲ್ಲಿರುವ 25 ಕೊಠಡಿಗಳು ಎಸಿ ಸೌಲಭ್ಯದಿಂದ ಕೂಡಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಗ್ರಾಹಕರಿಗಾಗಿ ಕಾಯ್ದಿರಿಸಲಾಗಿದೆ ಎಂದು ನಿರ್ದೇಶಕ ಬಸವರಾಜ್ ತಂಗಡಿ ಅವರು ತಿಳಿಸಿದ್ದಾರೆ.

ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು ಬೆಳಗಾವಿನಗರದಲ್ಲಿ ಹೊಸ ಹೊಸ ಉದ್ಯೋಗ-ವಸತಿಗಳು ಶರವೇಗದಲ್ಲಿ ವಿಶಾಲವಾಗಿ ಬೆಳೆಯುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದಿಂದ ಸಾವಿರಾರು ಜನ ಪ್ರತಿದಿನ ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅವರಿಗೆ ವಸತಿಯನ್ನು ಕಲ್ಪಿಸಲು ಹೈಟೆಕ್ ಡಿಲೈಟ್ ನಾವಿನ್ಯಪೂರ್ಣ ಕಟ್ಟಡವನ್ನು ನಿರ್ಮಿಸಿದೆ. ಈಗೀನ ಯುವಕರು ಕೇವಲ ಸರ್ಕಾರಿ ನೌಕರಿಯ ಬೆನ್ನು ಹತ್ತದೇ, ಉದ್ಯೋಗಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ತಮ್ಮೆಂದಿಗೆ ಇತರರನ್ನು ಬೆಳೆಸಲು ಮುಂದಾಗಬೇಕೆಂದು ಆರ್ಶೀವಚನ ನೀಡಿದರು.

ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಹೈಟೆಕ್ ಗ್ರೂಪ್ ಆರಂಭಿಸಿರುವ ಹೈಟೆಕ್ ಡಿಲೈಟ್ ಮುಂಬರುವ ದಿನಗಳಲ್ಲಿ ಮಾನಬಿಂದುವಾಗಿ ಪರಿವರ್ತನೆಯಾಗಲಿದೆ. ಪ್ರಶಸ್ತವಾದ ಕಟ್ಟಡ ಜನರ ಗಮನ ಸೆಳೆಯಲಿದೆ. ದಕ್ಷಿಣ ಭಾಗದಲ್ಲಿ ಉದ್ಯಮಬಾಗ ಪ್ರದೇಶವಿದ್ದು, ಹೊರಗಿನಿಂದ ಉದ್ಯೋಗ ವ್ಯವಸ್ಥಾಯಕ್ಕಾಗಿ ಬರುವವರಿಗೆ ಅನುಕೂಲಕರವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಜನರು ಇದರ ಸದುಪಯೋಗಪಡೆಯಬೇಕು. ಬೆಳಗಾವಿಯ ಜನರು ಈ ಸುಂದರ ಹೋಟೆಲ್’ಗೆ ಒಂದು ಬಾರಿ ಭೇಟಿ ನೀಡಲೇಬೇಕೆಂದು ಕರೆ ನೀಡಿದರು.
ವಿನಯಕುಮಾರ್ ಬಾಳಿಕಾಯಿ ಅವರು ನಮ್ಮ ಹೈಟೆಕ್ ಗ್ರೂಪ್’ನ 15ನೇ ವರ್ಷದ ವಾರ್ಷಿಕೋತ್ಸವದಲ್ಲಿ ಹೈಟೆಕ್ ಡಿಲೈಟ್ ಎಂಬ ಹೊಸ ಸಂಪೂರ್ಣ ಶಾಕಾಹಾರಿ ರೆಸ್ಟೋರೆಂಟ್ ಮತ್ತು ಲಾಡ್ಜಿಂಗ್ ಆರಂಭಿಸಲಾಗಿದೆ. ಹೈಟೆಕ್ ಗ್ರೂಪ್ ತನ್ನ ಉದ್ಯಮಗಳಲ್ಲಿ ಎಲ್ಲ ಗ್ರಾಹಕರಿಗೆ ತನ್ನ ಎಲ್ಲೆಯನ್ನು ಮೀರಿ ಸೇವೆಯನ್ನು ಸಲ್ಲಿಸಿದೆ. 15 ವರ್ಷಗಳಲ್ಲಿ ಟಿವ್ಹಿಎಸ್., ಅಶೋಕ ಲೆಲ್ಯಾಂಡ್, ಪಿಯಾಜಿಯೋ, ಬಾಶ್ ಮಲ್ಟಿ ಟಾಸ್ಕ್ ಸರ್ವಿಸ್, ಹೈಟೆಕ್ ಅಡ್ವಟೈಜರ್ಸ್ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ಲಕ್ಷಾಂತರ ಗ್ರಾಹಕರು ನಮ್ಮೊಂದಿಗಿದ್ದಾರೆ ಎಂದರು.

ಹೈಟೆಕ್ ಗ್ರುಪ್ ವಾಹನಗಳ ಕ್ಷೇತ್ರದೊಂದಿಗೆ ಈಗ ಹೈಟೆಕ್ ಡಿಲೈಟ್ ಮೂಲಕ ಹಾಸ್ಪಿಟ್ಯಾಲಿಟಿಯಲ್ಲಿ ಪಾದಾರ್ಪಣೆ ಮಾಡಿದೆ. ಇದೊಂದು ಸುಂದರ ಹೋಟೆಲ್ ಆಗಿದ್ದು, ಸುಮಾರು 25 ಎಸಿ ರೂಮ್ ಮತ್ತು ಕಾನ್ಫರೆನ್ಸ್ ರೂಮ್ ಸಹ ಲಭ್ಯವಿದೆ. ಅಲ್ಲದೇ ಸಂಪೂರ್ಣ ಶಾಕಾಹಾರಿ ರೆಸ್ಟೋರೆಂಟ್ ಕೂಡ ಹೊಂದಿದೆ. ಇದು ಗಡಿಭಾಗದ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾದ ಪ್ರವಾಸಿಗರು, ಕೈಗಾರಿಕೋದ್ಯಮಿಗಳು ಸೇರಿದಂತೆ ಇನ್ನುಳಿದವರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬ ವಿಶ್ವಾಸವನ್ನು ನಿರ್ದೇಶಕ ರಾಜೇಂದ್ರ ದೇಸಾಯಿ ಅವರು ವ್ಯಕ್ತಪಡಿಸಿದರು.

ಇದೇ ವೇಳೆ ಟಿವ್ಹಿಎಸ್ ಆರ್.ಟಿ ಎಕ್ಸ್ ದ್ವಿಚಕ್ರ ವಾಹನವನ್ನು ಲೋಕಾರ್ಪಣೆಗೊಳಿಸಲಾಯಿತು. ಈ ಅತ್ಯಾಧುನಿಕ ಬೃಹತ್ ವಾಹನದ ಮೈಮಾಟ ಮತ್ತು ಅದರ ಹೊಸ ಹೊಸ ಫೀಚರ್ಸ್’ಗಳಿಗೆ ಮನಸೋತ ಸುಮಾರು 110-120 ಜನರು ಈಗಾಗಲೇ ಇದನ್ನು ಬುಕ್ಕಿಂಗ್ ಮಾಡಿದ್ದು, ಮೊದಲ 6 ಜನರಿಗೆ ಈ ಸುಸಂದರ್ಭದಲ್ಲಿ ಡಿಲ್ಹಿವರಿ ನೀಡಲಾಯಿತು.
ಬೆಳಗಾವಿಗರು ನಮ್ಮ ಮೇಲಿಟ್ಟ ಪ್ರೀತಿ ವಿಶ್ವಾಸವೇ ಇಂದು ಹೈಟೆಕ್ ಗ್ರೂಪ್ 15ನೇ ವರ್ಷಕ್ಕೆ ಕಾಲಿಟ್ಟಿದೆ. ಇಂದು ಹೈಟೆಕ್ ಗ್ರೂಪ್ ಹೊಸ ಹೆಜ್ಜೆಯನ್ನಿಟ್ಟಿದ್ದು, 25 ಕೊಠಡಿಗಳ ಲಾಡ್ಜಿಂಗ್ ಮತ್ತು ಸಂಪೂರ್ಣ ಶಾಕಾಹಾರಿ ರೆಸ್ಟೋರೆಂಟ್’ನ್ನು ಆರಂಭಿಸಿದೆ. ಅಲ್ಲದೇ ಇದೇ ದಿನ ಹೊಸ ಟಿವ್ಹಿಎಸ್ ಆರ್.ಟಿ ಎಕ್ಸ್ ದ್ವಿಚಕ್ರ ವಾಹನವನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ದ್ವಿಚಕ್ರ ವಾಹನಕ್ಕೆ ಗ್ರಾಹಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ ಎಂದು ನಿರ್ದೇಶಕರಾದ ರಾಜೇಶ್ ಭೋಸಗಿ ಅವರು ತಿಳಿಸಿದರು.
ಇನ್ನು ಕುಲದೀಪ್ ಹಂಗೀರಗೇಕರ್ ಅವರು ಹೈಟೆಕ್ ಗ್ರುಪ್ ಈಗ ಹಾಸ್ಪಿಟ್ಯಾಲಿಟಿಯಲ್ಲಿ ಕಾಲಿಟ್ಟಿದ್ದು, ಇದರಲ್ಲಿಯೂ ಅವರು ಯಶಸ್ಸನು ಕಾಣಲಿ. ಟಿವ್ಹಿಎಸ್ ಆರ್.ಟಿ ಎಕ್ಸ್’ ಹೊಸ ದ್ವಿಚಕ್ರವಾಹನದ ಮೊದಲ ಗ್ರಾಹಕರಾಗಿ ಸಂತಸವೆನಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಸವರಾಜ್ ತಂಗಡಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿ ಹೈಟೆಕ್ ಸಮೂಹದ ನೂತನ ಉದ್ಯೋಗಕ್ಕೆ ಶುಭಕೋರಿದರು. ಹಾಗಾದರೇ ನೀವು ಒಂದು ಬಾರಿ ಖಾನಾಪೂರ ರಸ್ತೆಯ ಮೂರನೇ ರೇಲ್ವೆ ಗೇಟ್ ಬಳಿಯಿರುವ ಹೈಟೆಕ್ ಡಿಲೈಟ್’ಗೆ ಭೇಟಿ ನೀಡಿರಿ.
