Belagavi

ಬೆಳಗಾವಿಯಲ್ಲಿ ಕರಾಟೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ: 35 ಸಾಧಕರಿಗೆ ವಿವಿಧ ಬಣ್ಣದ ಬೆಲ್ಟ್ ಪ್ರದಾನ

Share

ಬೆಳಗಾವಿಯ ಬಿಡಿಬಿಎ ಸಭಾಂಗಣದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಇಂಡಿಯನ್ ಕರಾಟೆ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕರಾಟೆ ಪರೀಕ್ಷೆ ಹಾಗೂ ಬೆಲ್ಟ್ ಪ್ರದಾನ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಇರಾ ಬೋಗಾರ್ ಮತ್ತು ರೂಶಾಂಕ್ ಗೋವನಕೊಪ್ಪಗೆ ‘ಎಲ್ಲೋ ಬೆಲ್ಟ್’, ಅರ್ನವ್ ಕಾವಳೆ ಹಾಗೂ ಪವನ ಹೆಗಡೆಗೆ ‘ಗ್ರೀನ್ ಬೆಲ್ಟ್’ ಸೇರಿದಂತೆ ಒಟ್ಟು 35 ವಿದ್ಯಾರ್ಥಿಗಳಿಗೆ ಅವರ ಸಾಧನೆಗೆ ಅನುಗುಣವಾಗಿ ವಿವಿಧ ಬಣ್ಣದ ಬೆಲ್ಟ್’ಗಳನ್ನು ವಿತರಿಸಲಾಯಿತು. ಇದೇ ವೇಳೆ ಸಮರ್ಥ ಸಾಳುಂಕೆ, ಅತಾಶ್ರೀ ಧುಡೂಮ್, ಅರ್ಚನಾ ಕುರುಪ್ ಅವರಿಗೆ ‘ಆರೆಂಜ್ ಬೆಲ್ಟ್’ ಹಾಗೂ ಹಿರಿಯ ಹಂತದ ಸಾಧನೆ ಮಾಡಿದ ಕ್ರಾಂತಿ ಪಾಟೀಲ್, ನಿಧಿ ವೇರ್ಣೇಕರ್, ನೇಹಾ ಪೋಟೆ, ಅರಬ್ ದೋಶಿ ಮತ್ತು ಕುಂದನ ಪರಮಾರ ಅವರಿಗೆ ಪರ್ಪಲ್, ಬ್ಲೂ ಹಾಗೂ ಬ್ರೌನ್ ಬೆಲ್ಟ್ ನೀಡಿ ಗೌರವಿಸಲಾಯಿತು. ಅಂತರಾಷ್ಟ್ರೀಯ ಕರಾಟೆ ಮಾಸ್ಟರ್ ಮಧು ಪಾಟೀಲ್, ಆಕಾಶ್ ಪಾಟೀಲ್ ಮತ್ತು ಪ್ರಸಾದ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಆತ್ಮರಕ್ಷಣಾ ಕೌಶಲ್ಯಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.

Tags:

error: Content is protected !!