Vijaypura

ನಾಳೆ ಚಂದ್ರಗ್ರಹಣ: ಶಿವಗಿರಿಯಲ್ಲಿ ಜಪ ತಪ; ವಿವಿಧ ಧಾರ್ಮಿಕ ವಿಧಿ ವಿಧಾನಗಳ ಆಯೋಜನೆ

Share

ವರ್ಷದ ಮೊದಲ ಚಂದ್ರಗ್ರಹಣವು ಮಾರ್ಚ್ ತಿಂಗಳ ಆರಂಭದಲ್ಲೇ ಸಂಭವಿಸಲಿದೆ. ಹೋಳಿ ಹುಣ್ಣಿಮೆ ದಿನ ಮಾರ್ಚ್ 3ರಂದು ಚಂದ್ರಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಂಭವಿಸ ಲಿರುವ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಗರದ ಶಿವಗಿರಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಜಪ-ತಪ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಈ ಚಂದ್ರಗ್ರಹಣ ಮಧ್ಯಾಹ್ನ 3.23ಕ್ಕೆ ಆರಂಭವಾಗಿ ಸಂಜೆ 6.47ರವರೆಗೆ ಇರಲಿದೆ. ಗ್ರಹಣದ ನಂತರ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಆಚರಣೆಗಳು ನೆರವೇರಲಿವೆ. ಗ್ರಹಣದ ನಂತರ ದೇವಸ್ಥಾನದಲ್ಲಿ ನಿಗದಿತ ವಿಧಾನಗಳಂತೆ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.

ಭಕ್ತರು ಪಾಲಿಸಬೇಕಾದ ಸೂಚನೆಗಳನ್ನು ದೇವಸ್ಥಾನದಿಂದ ಪ್ರಕಟಿಸಲಾಗುತ್ತದೆ. ಕೇವಲ 13 ನಿಮಿಷ ಮಾತ್ರ ಕಾಣಿಸುವ ಸಾಧ್ಯತೆ ಇದೆ. ಅಂಗುಲಾಲ್ಪ ಗ್ರಹಣ ಇದ್ದರೂ ಶೌಚ ಆಚರಣೆ ಮಾಡಬೇಕು. ಈ ಚಂದ್ರಗ್ರಹಣವು ಖಗ್ರಾಸವಾಗಿದ್ದರೂ ಭಾರತದಲ್ಲಿ ಖಂಡಗ್ರಾಸವಾಗಿ ಕಾಣಿಸುವುದು. ಮಂಗಳವಾರ ಮಧ್ಯಾಹ್ನವೇ ಸ್ಪರ್ಷವಾಗಿದ್ದರೂ ಸಂಜೆ ಸೂರ್ಯಾಸ್ತ ಆದಮೇಲೆ ಪೂರ್ವದಿಕ್ಕಿನಲ್ಲಿ ಗ್ರಹಣಗ್ರಸ್ತ ಚಂದ್ರ ಕೆಲವು ನಿಮಿಷ ಮಾತ್ರ ಕಾಣಿಸುವನು.

Tags:

error: Content is protected !!