ಆರೋಗ್ಯವಂತ ಸಮಾಜ ಮತ್ತು ಮಾದಕ ವಸ್ತು ಮುಕ್ತ ಕರ್ನಾಟಕದ ಗುರಿಯೊಂದಿಗೆ ಬೆಳಗಾವಿ ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಇಂದು ಬೃಹತ್ ಮ್ಯಾರಾಥಾನ್ ಆಯೋಜಿಸಲಾಗಿತ್ತು. ಸಾವಿರಾರು ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿ ಹೆಜ್ಜೆ ಹಾಕುವ ಮೂಲಕ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಸಂದೇಶ ಸಾರಿದರು.


ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ಇಂದು ಬೆಳಿಗ್ಗೆ 5 ಕಿ.ಮೀ ಮತ್ತು 10 ಕಿ.ಮೀ ವಿಭಾಗದ ಮ್ಯಾರಾಥಾನ್ ಆಯೋಜಿಸಲಾಗಿತ್ತು. ‘ಐರನ್ ಮ್ಯಾನ್’ ಖ್ಯಾತಿಯ ಆರ್‌ಎಸ್‌ಐ ಸಂಗಮೇಶ್ ಅನಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಈ ಮ್ಯಾರಾಥಾನ್‌ನಲ್ಲಿ ನಗರ ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೆ, ಕೆಎಸ್‌ಆರ್‌ಪಿ ಮಚ್ಚೆ, ಪಿಟಿಎಸ್ ಕಂಗ್ರಾಳಿ, ಎಸ್‌ಡಿಆರ್‌ಎಫ್ ತಂಡಗಳು ಹಾಗೂ ನೂರಾರು ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಎಲ್ಲರಿಗೂ ಆರೋಗ್ಯ, ನಶಾ ಮುಕ್ತ ಕರ್ನಾಟಕ ಮತ್ತು ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಮೂರು ಪ್ರಮುಖ ಉದ್ದೇಶಗಳೊಂದಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ನಗರ ಪೊಲೀಸ್ ಆಯುಕ್ತರಾದ ಭೂಷನ್ ಬೋರಸೆ ಅವರು ರಾಜ್ಯದ ಎಲ್ಲೆಡೆ 5 ಮತ್ತು 10 ಕಿಲೋ ಮೀಟರ್ ಎಲ್ಲರಿಗೂ ಆರೋಗ್ಯ ನಶಾ ಮುಕ್ತ ಕರ್ನಾಟಕ ರಾಜ್ಯ, ನಮ್ಮ ಪೊಲೀಸ್ ನಮ್ಮ ಹೆಮ್ಮೆ ಮ್ಯಾರಾಥಾನ್ ನಡೆಯಿತು. ವಿವಿಧ ತಂಡಗಳು ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಸಮಾಜವನ್ನು ಮಾದಕ ವಸ್ತು ಮುಕ್ತವಾಗಿಸಲೂ ಆರೋಗ್ಯ ನಶಾ ಮುಕ್ತ ಕರ್ನಾಟಕ ರಾಜ್ಯ, ನಮ್ಮ ಪೊಲೀಸ್ ನಮ್ಮ ಹೆಮ್ಮೆ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ. ಸುಮಾರು 1000 ಜನರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ದೇಶದಲ್ಲಿ ಹಲವೆಡೆ ಮಾದಕವಸ್ತು ಸೇವಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಗ್ಗಿಸಲು ಈ ಒಂದು ಉಪಕ್ರಮವನ್ನು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಹಲವಾರು ಜನರು ಉತ್ಸಾಹದಿಂದ ಪಾಲ್ಗೊಂಡು ಮ್ಯಾರಾಥಾನ್’ನ್ನು ಯಶಸ್ವಿಗೊಳಿಸಿದರು.
