BELAGAVI

ಕುಂದಾನಗರಿಯಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಸಡಗರ

Share

ಮಹಾತ್ಮರು ಕಾಲವೆಂಬ ಮರಳಿನ ಮೇಲೆ ತಮ್ಮ ಸಾಧನೆಯ ಪವಿತ್ರ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಆ ಗುರುತುಗಳನ್ನು ಅನುಸರಿಸಿದರೆ ಮಾತ್ರ ನಾವು ಜೀವನದ ಗುರಿ ತಲುಪಲು ಸಾಧ್ಯ ಎಂದು ಉಪನ್ಯಾಸಕರಾದ ಡಾ. ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.

ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಇಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯ ಸಡಗರ ಮನೆಮಾಡಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಭವ್ಯ ಸಮಾರಂಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಲ್ಮಠ ಸ್ವಾಮೀಜಿ ಮತ್ತು ಬಸವರಾಜ್ ಶಾಸ್ತ್ರಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ಗಣ್ಯರಾದ ಚಂದ್ರಶೇಖರಯ್ಯಾ ಸವಡಿ, ವಿ. ಜಿ. ನೀರಲಗಿಮಠ, ರತ್ನಪ್ರಭಾ ಬೆಲ್ಲದ, ವಿದ್ಯಾವತಿ ಭಜಂತ್ರಿ, ವಿಜಯ್ ಜಾಧವ್, ರಾಮು ಗುಗವಾಡ ಸೇರಿದಂತೆ ವಿವಿಧ ಗಣ್ಯರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ನಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ವೇಳೆ ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ, ಉಪನ್ಯಾಸಕರಾದ ಡಾ. ಗುರುದೇವಿ ಹುಲ್ಲೆಪ್ಪನವರಮಠ ಮಹಾತ್ಮರು ಕಾಲ ಎನ್ನುವ ಮರಳು ಮೇಲೆ ತಮ್ಮ ಸಾಧನೆಯ ಪವಿತ್ರವಾದ ಜೀವನದ ಹೆಜ್ಜೆಯ ಗುರುತುಗಳನ್ನುಇಟ್ಟಿ ಹೋಗಿದ್ದು, ಅವರ ಹೆಜ್ಜೆಯ ಗುರುತುಗಳ ಮೇಲೆ ನಮ್ಮ ಹೆಜ್ಜೆಗಳನ್ನು ಇಟ್ಟು ಸಾಗಿದರೇ, ಅವರು ಏರಿದ ಎತ್ತರ ಮತ್ತು ಅವರು ತಲುಪಿದ ದಡವನ್ನು ತಲುಪಲು ಸಾಧ್ಯ. ಭಾರತೀಯ ಸನಾತನ ಧರ್ಮಗಳಲ್ಲಿ ಒಂದಾದ ಸುಮಾರು 4000 ಸಾವಿರ ವರ್ಷದ ಇತಿಹಾಸವಿರುವ ವೀರಶೈವ ಧರ್ಮಕ್ಕೆ ಸೈದ್ಧಾಂತಿಕ ನೆಲೆಗಟ್ಟನ್ನು ಒದಗಿಸಿದವರು. ಶಿವಾತ್ಮಕ ತತ್ವನ್ನು ಜೀವ ಶಿವನಾಗುವ ಬಗೆಯನ್ನು ಕಾಲ್ನುಡಿಗೆಯಿಂದ ಶ್ರೀಲಂಕಾ, ದಕ್ಷಿಣ ಏಷ್ಯಾ ಸೇರಿದಂತೆ ವಿವಿಧೆಡೆ ಸಂಚರಿಸಿರುವುದನ್ನ ಅವರ ಚರಿತ್ರೆಯಲ್ಲಿ ಓದಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಲ್ಪನಾ ಗಾಣಿಗೇರ್, ಭೀದೇಂದ್ರ ನಾಯಕ್, ಹೊನ್ನಯ್ಯ ಜಂಬೈ, ಶ್ಯಾಮ್, ಹೇಮಂತ್ ಹಾವಾಲ್, ರೋಹನ್ ಜಾವಳಿ, ಬಸವರಾಜ್ ಕುಂಬಾರ, ವಿಠ್ಠಲ್ ವಡ್ಡರ್ ಹಾಗೂ ಎಸ್. ಕೆ. ಜೋಶಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Tags:

error: Content is protected !!