BELAGAVI

ಮಾರ್ಚ್ 3 ರಂದು ಬೆಳಗಾವಿಯಲ್ಲಿ ಶಾಸಕ ಅಭಯ್ ಪಾಟೀಲ್ ಸಾರಥ್ಯದ ‘ಹೋಳಿ ಮಿಲನ್-2026’ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಬಣ್ಣಗಳ ಹಬ್ಬದ ಸಂಭ್ರಮ!

Share

ಕುಂದಾನಗರಿ ಬೆಳಗಾವಿಯಲ್ಲಿ ಈಗಲೇ ಹೋಳಿ ಹಬ್ಬದ ಕಳೆಗಟ್ಟಿದೆ. ಶಾಸಕ ಅಭಯ್ ಪಾಟೀಲ್ ಅವರ ಸಾರಥ್ಯದಲ್ಲಿ ಮಾರ್ಚ್ 3 ರಂದು ಭವ್ಯ ‘ಹೋಳಿ ಮಿಲನ್-2026’ ಕಾರ್ಯಕ್ರಮ ಆಯೋಜನೆಯಾಗಿದ್ದು, ಇಡೀ ನಗರವೇ ಬಣ್ಣಗಳಲ್ಲಿ ಮೀಯಲು ಸಜ್ಜಾಗಿದೆ.

ಬೆಳಗಾವಿ ನಗರದ ಜನಪ್ರಿಯ ನಾಯಕ ಹಾಗೂ ಶಾಸಕ ಅಭಯ್ ಪಾಟೀಲ್ ಅವರ ಅರ್ಪಣೆಯಲ್ಲಿ ಮಾರ್ಚ್ 3 ರಂದು ‘ಹೋಳಿ ಮಿಲನ್-2026’ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಟಿಳಕವಾಡಿ ಭಾಗದ ಪ್ರಸಿದ್ಧ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಈ ಬಣ್ಣಗಳ ಹಬ್ಬ ನಡೆಯಲಿದ್ದು, ನಗರದ ಸಾವಿರಾರು ಜನರು ಒಂದೆಡೆ ಸೇರಿ ಸಾಮರಸ್ಯದ ಹೋಳಿ ಆಚರಿಸಲಿದ್ದಾರೆ. ಮಾರ್ಚ್ 3 ರಂದು ಬೆಳಿಗ್ಗೆ 9.30 ರಿಂದಲೇ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಸಂಗೀತ, ನೃತ್ಯ ಹಾಗೂ ಬಣ್ಣಗಳ ಓಕುಳಿಯೊಂದಿಗೆ ಯುವ ಸಮೂಹ ಮತ್ತು ಸಾರ್ವಜನಿಕರು ಸಂಭ್ರಮಿಸಲಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಶಾಸಕ ಅಭಯ್ ಪಾಟೀಲ್ ಅವರು ಅತ್ಯಂತ ವಿಶೇಷವಾಗಿ ಈ ಕಾರ್ಯಕ್ರಮವನ್ನು ರೂಪಿಸಿದ್ದು, ಬೆಳಗಾವಿಯ ಜನತೆಗೆ ಹೋಳಿ ಹಬ್ಬದ ಶುಭಾಶಯ ಕೋರುವುದರ ಜೊತೆಗೆ ಎಲ್ಲರನ್ನೂ ಈ ಬಣ್ಣದ ಸಂಭ್ರಮಕ್ಕೆ ಆಹ್ವಾನಿಸಿದ್ದಾರೆ.

Tags:

error: Content is protected !!