Belagavi

ಸಾವಿನಲ್ಲೂ ಸಾರ್ಥಕತೆ ಮೆರೆದ ಉರ್ಮಿಳಾ ಪ್ರಭು; ಮರಣೋತ್ತರ ದೇಹದಾನ, ನೇತ್ರದಾನ ಹಾಗೂ ಚರ್ಮದಾನ

Share

ಬೆಳಗಾವಿಯ ರಾಮಲಿಂಗಖಿಂಡ್ ಗಲ್ಲಿಯ ನಿವಾಸಿ ಉರ್ಮಿಳಾ ಆತ್ಮಾರಾಮ್ ಪ್ರಭು ಅವರು ತಮ್ಮ ಸಾವಿನ ನಂತರವೂ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವ ಮೂಲಕ ಅಮರರಾಗಿದ್ದಾರೆ. ಅವರ ಕುಟುಂಬದವರು ತೆಗೆದುಕೊಂಡ ದೇಹದಾನ ಮತ್ತು ಅಂಗಾಂಗ ದಾನದ ನಿರ್ಧಾರ ಇಂದು ಹಲವು ಜೀವಗಳಿಗೆ ಆಸರೆಯಾಗಿದೆ.”

ಮೂಲತಃ ಪುಣೆಯವರಾಗಿದ್ದು, ಸದ್ಯ ಬೆಳಗಾವಿಯಲ್ಲಿ ನೆಲೆಸಿದ್ದ 78 ವರ್ಷದ ಉರ್ಮಿಳಾ ಆತ್ಮಾರಾಮ್ ಪ್ರಭು ಅವರು ನಿನ್ನೆ ರಾತ್ರಿ ನಿಧನರಾದರು. ವಿಷಯ ತಿಳಿಯುತ್ತಿದ್ದಂತೆಯೇ ಜೈಂಟ್ಸ್ ಐ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಮದನ್ ಬಾಮಣೆ ಅವರು ಕುಟುಂಬದವರನ್ನು ಸಂಪರ್ಕಿಸಿ ದೇಹದಾನದ ಮಹತ್ವವನ್ನು ವಿವರಿಸಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಅವರ ಸೋದರಸಂಬಂಧಿ ಸಿದ್ದಾರ್ಥ್ ಪ್ರಭು ಅವರು ಸಮಾಜದ ಹಿತದೃಷ್ಟಿಯಿಂದ ದೇಹದಾನಕ್ಕೆ ಒಪ್ಪಿಗೆ ನೀಡಿದರು.

ಇದರಂತೆ, ತಡರಾತ್ರಿಯೇ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಲಾಯಿತು. ಇದರೊಂದಿಗೆ ಕೆಎಲ್‌ಇ ನೇತ್ರ ಬ್ಯಾಂಕ್‌ಗೆ ನೇತ್ರದಾನ ಹಾಗೂ ರೋಟರಿ ಸ್ಕಿನ್ ಬ್ಯಾಂಕ್‌ಗೆ ಚರ್ಮದಾನವನ್ನೂ ಮಾಡಲಾಯಿತು. ಈ ದೇಹದಾನದಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅನುಕೂಲವಾಗಲಿದ್ದು, ನೇತ್ರದಾನದಿಂದ ಇಬ್ಬರು ಅಂಧರ ಬಾಳಿಗೆ ಬೆಳಕು ಸಿಗಲಿದೆ. ಇನ್ನು ಚರ್ಮದಾನವು ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಪ್ರಭು ಕುಟುಂಬದ ಈ ಧೈರ್ಯದ ನಿರ್ಧಾರಕ್ಕೆ ಜೈಂಟ್ಸ್ ಐ ಫೌಂಡೇಶನ್ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರು ಅಂಗಾಂಗ ದಾನದ ಬಗ್ಗೆ ಜಾಗೃತಿ ಹೊಂದಲು ಕರೆ ನೀಡಿದೆ

Tags:

error: Content is protected !!