ಬೆಳಗಾವಿಯ ಮನೆಗಳ ಅಂದವನ್ನು ಹೆಚ್ಚಿಸಲು ಈಗ ದೇಶದ ಖ್ಯಾತ ಫರ್ನಿಚರ್ ಬ್ರ್ಯಾಂಡ್ ‘ನೀಲಕಮಲ್ ಹೋಮ್ಸ್’ ನಿಮ್ಮ ನಗರಕ್ಕೆ ಲಗ್ಗೆ ಇಟ್ಟಿದೆ. ನೆಹರುನಗರದ ಕೊಲ್ಹಾಪುರ ವೃತ್ತದಲ್ಲಿ ಇಂದು ನೂತನ ಶೋರೂಂ ಉದ್ಘಾಟನೆಗೊಂಡಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅಂತರಾಷ್ಟ್ರೀಯ ಮಟ್ಟದ ಫರ್ನಿಚರ್ಸ್ ಲಭ್ಯವಿವೆ. ಉದ್ಘಾಟನಾ ಸುಸಂದರ್ಭದಲ್ಲಿ ವಿಶೇಷ ಆಫರ್ಸ್


ಬೆಳಗಾವಿ ನೆಹರುನಗರದ ಕೊಲ್ಹಾಪುರ ವೃತ್ತದಲ್ಲಿ ಬೆಳಗಾವಿಗರಿಗೆ ಸೇವೆಯನ್ನು ನೀಡಲು ಹೊಸದಾಗಿ ದೇಶದ ಪ್ರಖ್ಯಾತ ನೀಲಕಮಲ್ ಹೊಮ್ಸ್ ಫರ್ನಿಚರ್ ಶೋರೂಂ ಇಂದಿನಿಂದ ಆರಂಭಗೊಂಡಿದೆ. ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಂಚಾಲಕರಾದ ಸಂತೋಷ್ ಪಾವಟೆ, ಸುಭಾಷಿತ ಪಾವಟೆ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ನೂತನ ಶೋರೂಮಿನ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು.

ನೀಲಕಮಲ್ ಹೊಮ್ಸ್’ನ ಒಂದೇ ಸೂರಿನಡಿ ಲೀವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್, ಕಿಚನ್, ಫರ್ನಿಶಿಂಗ್, ಗಿಫ್ಟಿಂಗ್, ಮಾಟ್ರೇಸ್, ಸೋಫಾ, ರಿಕ್ಲೈನರ್, ಸೋಫಾ ಕಮ್ ಬೆಡ್, ಟೇಬಲ್ಸ್, ಟಿ.ವ್ಹಿ ಯುನಿಟ್ಸ್, ಶೂ ರಾಕ್ಸ್ ಎಲ್ಲವೂ ಒಂದೇ ಸೂರಿನಡಿ ಲಭ್ಯವಿದೆ. ಉದ್ಘಾಟನೆಯ ಶುಭ ಸಂದರ್ಭದಲ್ಲಿ ಒಂದು ವಾರದ ವರೆಗೆ ವಿಶೇಷ ಆಫರ್ ನೀಡಲಾಗುತ್ತಿದ್ದು, 1 ಲಕ್ಷದೊಳಗೆ ಖರೀದಿ ಮಾಡಿದರೇ, 25 ಸಾವಿರ ಮೌಲ್ಯದ ರಿಕ್ಲೈನರ್ ಕೇವಲ 5 ಸಾವಿರ ರೂಪಾಯಿಯಲ್ಲಿ ಮಾತ್ರ ಮನೆಗೊಯ್ಯಬಹುದಾಗಿದೆ.

ಸಾನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜೀಗಳು, ಬೆಳಗಾವಿ ನಗರದ ಹೃದಯಭಾಗದಲ್ಲಿ ನೀಲ್ ಕಮಲ್ ಹೋಮ್ಸ್ ಆರಂಭಗೊಂಡಿದೆ. ಬೆಳಗಾವಿ ನಗರವಷ್ಟೇ ಅಲ್ಲದೇ ಸುತ್ತಮುತ್ತಲಿನ ತಾಲೂಕುಗಳು ಶರವೇಗದಲ್ಲಿ ಬೆಳೆಯುತ್ತಿದ್ದು, ಹೊಸ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅಂದವಾದ ಮನೆಯ ಶೋಭೆಯನ್ನು ಹೆಚ್ಚಿಸಲು ಬೇರೆ ನಗರಗಳಿಂದ ತರಲಾಗುತ್ತಿತ್ತು. ಆದರೇ, ಈಗ ಬೆಳಗಾವಿಯ ನೀಲಕಮಲ್ ಹೊಮ್ಸ್’ನಲ್ಲೇ ಎಲ್ಲ ಬಗೆಯ ವಸ್ತುಗಳು ದೊರೆಯುತ್ತಿರುವುದು ಸಂತಸದ ವಿಷಯ. ಪಾವಟೆ ದಂಪತಿಗಳು ಬೆಳಗಾವಿಗೆ ಅತಿದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಯಾವುದೇ ಉದ್ಯೋಗವನ್ನು ಆರಂಭಿಸಲು ಅದರ ಬಗೆಗಿನ ಉತ್ಸಾಹವಿರಬೇಕು. ಬೆಳಗಾವಿ ಅತಿವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಮಕ್ಕಳು, ಮಹಿಳೆಯರು, ರೈತರು ಎಲ್ಲರಿಗೂ ಬೆಳೆಯುವ ವಾತಾವರಣವಿದೆ. ಇಂತಹ ಶೋರೂಂಗಳು ಬೆಳಗಾವಿಯಲ್ಲಿ ಆದರೇ, ಇನ್ನಷ್ಟು ಬೆಳಗಾವಿ ನಗರ ಬೆಳೆಯಲು ಸಾಧ್ಯ. ಉದ್ಯೋಗಗಳು ಬೆಳೆಯಲು ಜನರ ಆಶ್ರಯ ಮತ್ತು ಸಹಕಾರವನ್ನು ತೆಗೆದುಕೊಳ್ಳಬೇಕು. ಪಾವಟೆ ಪರಿವಾರದವರ ಈ ಉದ್ಯೋಗ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಂಚಾಲಕರಾದ ಸಂತೋಷ್ ಪಾವಟೆ ಅವರು ಇದು ಬೆಳಗಾವಿಗರ ಶೋರೂಂ ಆಗಿದ್ದು, ಆಧುನಿಕ ಮನೆಗೆ ಅತ್ಯಾಧುನಿಕ ಫರ್ನಿಚರ್ಸ್ ನೀಲಕಮಲ್ ಒದಗಿಸುತ್ತಿದೆ. ಗ್ರಾಹಕರ ಬಜೆಟ್, ಅವರ ಬೇಡಿಕೆ ಮತ್ತು ಕೈಗೆಟಕುವ ದರವನ್ನು ಕೇಂದ್ರೀಕರಿಸಿ ನೀಲಕಮಲ್ ತನ್ನ ಸೇವೆಯನ್ನು ನೀಡುತ್ತಿದೆ. ಉತ್ಕೃಷ್ಟತೆ, ವಿಶ್ವಾಸ ಮತ್ತು ವಾರಂಟಿ ನಂತರದ ಸೇವೆಯನ್ನು ನೀಲಕಮಲ್ ನೀಡಲಿದೆ. ಒಂದೇ ಸೂರಿನಲ್ಲಿ ಎಲ್ಲ ಬಗೆಯ ಉತ್ಪನ್ನಗಳು ಲಭ್ಯವಿದ್ದು ಇದರ ಸದುಪಯೋಗಪಡೆಸಿಕೊಳ್ಳಬೇಕೆಂದು ಕರೆ ನೀಡಿದರು.

ನೀಲಕಮಲ್ ಸೌಥ್ ರಿಜಿನಲ್ ಹೆಡ್ ಮನ್ಸೂರ್ ಅವರು ನೀಲಕಮಲ್ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಸುಪ್ರಸಿದ್ಧ ಫರ್ನಿಚರ್ಸಗಳ ಆಯ್ಕೆಯಾಗಿದೆ. ಇದು ತನ್ನ ಖ್ಯಾತಿಗೆ ಮನೆ ಮಾತಾಗಿದೆ. ತನ್ನ ಅಂದ ಅತ್ಯಾಧುನಿಕತೆ ಮತ್ತು ಬಾಳಿಕೆಗೆ ಎಲ್ಲೆಡೆ ಗ್ರಾಹಕರ ವಿಶ್ವಾಸವನ್ನು ಗೆದ್ದಿದೆ. ಮನೆ-ಮಠ, ವಿದ್ಯಾಲಯ ಮಹಾವಿದ್ಯಾಲಯ, ಕಚೇರಿ ಕಾರ್ಯಾಲಯಗಳಿಗೆ ಆವಶ್ಯಕ ಎಲ್ಲ ತರಹದ ಫರ್ನಿಚರ್ಸ್ ನೀಲಕಮಲ್’ನಲ್ಲಿ ಲಭ್ಯವಿವೆ. ನಾವು ಕೇವಲ ಫರ್ನಿಚರ್ಸ್’ಗಳನ್ನು ಮಾರಾಟ ಮಾಡುತ್ತಿಲ್ಲ. ನಿಮ್ಮ ಕಟ್ಟಡದ ಅಂದವನ್ನು ಹೆಚ್ಚಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂತೋಷ್ ಪಾವಟೆ, ಸುಭಾಷ್ ಪಾವಟೆ, ಸುಭಾಷಿತಾ ಪಾವಟೆ, ನಂಜೇಗೌಡ, ನಾಗರಾಜ್ ಪಾಟೀಲ್, ಮದ್ದೂರ, ಬಸವರಾಜ್ ಜವಳಿ, ಕಿರಣ ಅಂಗಡಿ, ಡಾ. ವಿನಯ್ ದಾಸ್ತಿಕೊಪ್ಪ, ಶಿಲ್ಪಾ ದಾಸ್ತಿಕೊಪ್ಪ, ಎಂ.ಜೆ.ಶಿವಕುಮಾರ್, ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
