Belagavi

ಬೆಳಗಾವಿಯಲ್ಲಿ ಯೋಗದಾ ಸತ್ಸಂಗ ಧ್ಯಾನ ಕೇಂದ್ರದ ಹೊಸ ಮಂದಿರದ ಉದ್ಘಾಟನೆ

Share

ಬೆಳಗಾವಿ: ಒಬ್ಬ ಯೋಗಿಯ ಆತ್ಮಕಥೆಯು ಪರಮಹಂಸ ಯೋಗಾನಂದರ ಜೀವನ ಅನುಭವಗಳ ಒಂದು ಪ್ರತ್ಯಕ್ಷ ವಿವರವಾಗಿದೆ. ಅಗತ್ಯವಾದ ಶಾಂತತೆ ಮತ್ತು ಏಕಾಗ್ರತೆಯ ಆಳವು, ಯೋಗದಾ ಸತ್ಸಂಗದ ಏಕಾಗ್ರತೆ ಮತ್ತು ಧ್ಯಾನದ ವೈಜ್ಞಾನಿಕ ತಂತ್ರಗಳ ಅಚಲ ಅಭ್ಯಾಸದ ಮೂಲಕ ಸ್ವಾಭಾವಿಕವಾಗಿ ನಡೆಯಲು ಸಾಧ್ಯ, ಜೀವನದ ನೆಮ್ಮದಿಗಾಗಿ ಅವರ ಮಾರ್ಗದಲ್ಲಿ ಸಾಗೋಣ ಎಂದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ರಾಂಚಿ ಆಶ್ರಮದ ಸ್ವಾಮಿ ಶ್ರದ್ಧಾನಂದಜೀ ಅವರು ಹೇಳಿದರು.

ನಗರದ ಸದಾಶಿವನಗರದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಅಡಿಯಲ್ಲಿ ಯೋಗ ದಾಸತ್ಸಂಗ ಧ್ಯಾನ ಕೇಂದ್ರದ – ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಿ, ಪಲ್ಲಕ್ಕಿ ಮೆರವಣಿಗೆ ನಡೆಸಿ ಅವರು ಮಾತನಾಡಿದರು.

ದೇವರ ಮೇಲಿನ ಆಸೆಯನ್ನು ನಮಗೆ ಯಾರೂ ಕೊಡಲು ಸಾಧ್ಯವಿಲ್ಲ, ನಮ್ಮಲ್ಲಿ ನಾವೇ ಅದನ್ನು ಬೆಳಸಿಕೊಳ್ಳಬೇಕು ಎಂದರು. ಸಮೂಹ ಧ್ಯಾನದ ಮಹತ್ವವನ್ನು ವಿವರಿಸುತ್ತ, ಭಕ್ತಾದಿಗಳು ಹೆಚ್ಚು ಸಮೂಹ ಧ್ಯಾನದಲ್ಲಿ ಪಾಲ್ಗೊಳ್ಳಲು ಕರೆ ಕೊಟ್ಟರು.

ಪರಮಹಂಸ ಯೋಗಾನಂದರು 1893ರ ಜನವರಿ 5ರಂದು ಜನಿಸಿದರು. ಅವರು ಬೆಳೆದದ್ದು ಮುಕುಂದ ಲಾಲ್ ಘೋಶ್ ಎಂಬ ಹೆಸರಿನಿಂದ. ಹುಟ್ಟಿದ್ದು ಬಂಗಾಳಿ ಕುಟುಂಬದಲ್ಲಿ. ಅದೇನು ಪುಣ್ಯ ಭೂಮಿಯೋ ಆ ಬಂಗಾಳ. ಎಂತೆಂತಹ ಅಧ್ಯಾತ್ಮ-ವೈಜ್ಞಾನಿಕ – ಚಿಂತಕ ಮಹಾಶಯರನ್ನು ಆ ನಾಡು ಕಂಡಿದೆ. ಯೋಗದಾಸತ್ಸಂಗ ಸೊಸೈಟಿಆಫ್ ಇಂಡಿಯಾವು ಯೋಗಿಯ ಆತ್ಮಕಥೆಯ ಲೇಖಕರಾದ ಶ್ರೀ ಪರಮಹಂಸಯೋಗಾನಂದಜೀಯ ವರಿಂದ 1917 ರಲ್ಲಿ ಸಂಸ್ಥಾಪಿಸಿ, ಅಧ್ಯಾತ್ಮ-ವೈಜ್ಞಾನಿಕ ಚಿಂತನೆಗಳು ವಿಶ್ವಕ್ಕೆ ಸಾರಿದವರು ಎಂದರು.

ಬೆಳಗಿನ ಜಾವ, ಯೋಗಿಯ ಆತ್ಮಕಥೆಯ ಲೇಖಕರಾದ ಶ್ರೀ ಪರಮಹಂಸಯೋಗಾನಂದಜೀ ಗುರುಗಳ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಪಲ್ಲಕಿಯಲ್ಲಿರಿಸಿ, ಭಕ್ತಾದಿಗಳು ಆಧ್ಯಾತ್ಮಿಕ ಮೆರವಣಿಗೆಯನ್ನು ನಡೆಸಿದರು.

ಈ ವೇಳೆ ಮಂದಿರಕ್ಕಾಗಿನೆರವು ನೀಡಿದ ಚುನಮರಿ ದಂಪತಿಗಳನ್ನು ಹಾಗೂ“ವೈಷ್ಣವಿರೆಸಿಡೆನ್ಸಿ”ಯ ಬಿಲ್ಡರ್ ವೀರೇಶ್ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕ್ರಿಯಾಯೋಗ ದೀಕ್ಷೆಯಸಮಾರಂಭವನ್ನೊಳಗೊಂಡ ಈ ಮೂರು ದಿನಗಳಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಯೋಗದಾ ಸತ್ಸಂಗಧ್ಯಾನ ತಂತ್ರಗಳ ತರಗತಿಗಳನ್ನು ವೈಎಸ್ ಎಸ್ ಸಂನ್ಯಾಸಿಗಳು ನಡೆಸಿಕೊಡುತ್ತಾರೆ.

ಈ ಸಮಾರಂಭದಲ್ಲಿ ಯೋಗದಾಸತ್ಸಂಗ ಆಶ್ರಮದ ಇತರ ಸಂನ್ಯಾಸಿಗಳಾದ ಸ್ವಾಮಿ ಧೈರ್ಯಾನಂದಜಿ ಹಾಗು ಸ್ವಾಮಿಶ್ರೇಯಾನಂದಜಿ, ಧ್ಯಾನ ಕೇಂದ್ರದ ನಿರ್ವಾಹಕರು ಹಾಗು ಹೊಸಮಂದಿರ ನಿರ್ಮಿಸಲು ನೆರವು ನೀಡಿದ ಶಶಿಕಾಂತ್ ಚುನಮರಿ , ಮಂಜುಳಾ ಚುನಮರಿ ಹಾಗೂ ದೇಣಿಗೆ ನೀಡಿದ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು

Tags:

error: Content is protected !!