ಕಳೆದ 2016 ಜೂನ್ 15 ರಂದು ನಡೆದಿದ್ದ ಧಾರವಾಡ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಹಿನ್ನಲೆಯಲ್ಲಿ, ಧಾರವಾಡದಲ್ಲಿ ಕುಲಕರ್ಣಿ ಅಭಿಮಾನಿಗಳು ಸಾರ್ವಜನಿಕರಿಗೆ ಶುಕ್ರವಾರ ಸಂಜೆ ಉಪ್ಪಿಟ್ಟು ಶೀರಾ ಹಂಚಿ ಸಂಭ್ರಮಿಸಿದರು.

ನಗರದ ವಿವೇಕಾನಂದ ವೃತದಲ್ಲಿ ಸಾರ್ವಜನಿಕರಿ ಉಚಿತ ಉಪ್ಪಿಟ್ಟು ಹಾಗೂ ಶೀರಾ ಹಂಚಿ ವಿನಯ ಕುಲಕರ್ಣಿ ಅಭಿಮಾನಿಗಳದ ವತಿಯಿಂದ ಸಂಭ್ರಮಾಚಾರಣೆ ಮಾಡಲಾಯಿತು. ಈ ವೇಳೆ ವಿನಯ ಕುಲಕರ್ಣಿ ಪರ ಘೋಷಣೆ ಕೂಗಿ ಅಭಿಮಸನಿಗಳ ಸಂಭ್ರಮಿಸಿದರು. ಸುಮಾರು ಎಂಟು ತಿಂಗಳಿಂದ ಸಾಕ್ಷಿಗಳಿಗೆ ಬೇದರಿಕೆ ಆರೋಪ ಹಿನ್ನೆಲೆಯಲ್ಲಿ ಜಾಮೀನು ರದ್ದಾಗಿ ಕುಲಕರ್ಣಿ ಜೈಲು ಸೇರುವಂತಾಗಿತ್ತು. ಹೈಕೋರ್ಟ್ನಲ್ಲಿ ಇವರ ಜಾಮೀನು ಅರ್ಜಿ ತಿರಸ್ಕರಾಗೊಂಡಿತ್ತು. ಮತ್ತೆ ಸುಪ್ರೀಂ ಕೋರ್ಟ್ಗೆ ವಿನಯ ಪರ ವಕೀಲರು ಅರ್ಜಿ ಸಲ್ಲಿಸಿದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಶುಕ್ರವಾರ ಕುಲಕರ್ಣಿಯವರಿಗೆ ಜಾಮೀನು ಮಂಜೂರು ಮಾಡಿದೆ. ಜತೆಗೆ ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸುವಂತೆ ಸುಪ್ರೀಂ ಸೂಚನೆ ನೀಡಿದೆ. ಸದ್ಯ ಈಗ ಬಹುದಿನಗಳಿಂದ ಜೈಲುವಾಸಿಯಾಗಿದ್ದ ವಿನಯಗೆ ಜಾಮೀನು ದೊರೆತ ಹಿನ್ನಲೆಯಲ್ಲಿ ಈಗ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
