Chikkodi

ಮಕ್ಕಳ ಪರೀಕ್ಷೆ ಪ್ರಾರಂಭ ಆದ್ರೂ ವ್ಯವಸ್ಥಿತವಾಗಿ ವಿದ್ಯುತ್ ಇಲ್ಲಾ:ತೋಟಪಟ್ಟಿ ನಿವಾಸಿಗಳ ಅಳಲು

Share

ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ತೋಟಪಟ್ಟಿ ಪ್ರದೇಶಗಳಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಅಲ್ಲಿಯ ಜನರು ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಾದ ಪ್ರಭಾ ಬಂಡಗರಯವರಿಗೆ ಮನವಿಯನ್ನು ಸಲ್ಲಿಸಿದರು.

ಚಿಕ್ಕೋಡಿಯ ಹೆಸ್ಕಾಂ ಕಚೇರಿಯಲ್ಲಿ ಮನವಿ ಸಲ್ಲಿಸಿದ ಗ್ರಾಮಸ್ಥರು ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಮನವಿಯನ್ನು ಮಾಡಿಕೊಂಡರು.ಇದೇ ವಕೀಲರು ಸ್ಥಳೀಯರಾದ ಪ್ರಶಾಂತ ಹುಕ್ಕೇರಿಯವರು ಮಾತನಾಡಿದ ಉಮರಾಣಿ ಗ್ರಾಮದ ಹಳಿಜೋಳಿ ಕೋಡಿ,ರಾಮಲಿಂಗ ಕೋಡಿ,ಸಿದಗೌಡರ ತೋಟ,ಸನದಿ ತೋಟ,ಗೆದ್ದಲ್ಯಾಗೋಳ ತೋಟ ಹಾಗೂ ಇತರ ತೊಟ್ಟಿಗಳಲ್ಲಿ ‌ರಾತ್ರಿ 10 ಗಂಟೆಯಿಂದ 2 ಗಂಟೆಯವರೆಗೆ ವಿದ್ಯುತ ಇರುವುದಿಲ್ಲ.ಇದರಿಂದಾಗಿ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಓದಲು ತೊಂದರೆ ಆಗುತ್ತಿದೆ.ಕೂಡಲೇ ಅಧಿಕಾರಿಗಳು ಎಚ್ಚೆಕೊಂಡು ರಾತ್ರಿ 10 ಗಂಟೆಯಿಂದ 2 ಗಂಟೆಯವರೆಗೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ಗಜಾನನ ದಾನನ್ನವರ ಹಾಗೂ ಪಾರ್ವತಿ ಢವಳೇಶ್ವರ ಎಂಬುವರು ಮಾತನಾಡಿದ ಪಿಯುಸಿ-ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಪ್ರಾರಂಭವಾಗಿವೆ.ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಲು ರಾತ್ರಿಯ ಸಮಯದಲ್ಲಿ ವಿದ್ಯುತ್ ನೀಡುತ್ತಿಲ್ಲ.ವಿದ್ಯಾರ್ಥಿಗಳು ಹೇಗೆ ಪರೀಕ್ಷೆ ಮಾಡಬೇಕೆಂದು ಪ್ರಶ್ನಿಸಿದರು.ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವಿಲ್ಲ.ಇದರಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.ಹೀಗಾಗಿ ಹೆಸ್ಕಾಂ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲವಾದರೆ ತೋಟಪಟ್ಟಿಯ ಎಲ್ಲ ಜನರನ್ನು ತಂದು ಉಗ್ರವಾದ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗಜಾನನ ದಾನನ್ನವರ,ಪಾರ್ವತಿ ಢವಳೇಶ್ವರ,ಬಾಳೇಶ ಕೂಟೋಳೆ,ಪಿಂಟು ರಾಮನಕಟ್ಟಿ,ಮಹಾಂತೇಶ ದೊಡ್ಡಮನಿ,ಸಂದೀಪ ನರಟ್ಟಿ,ರಾಮಚಂದ್ರ ಶಾಗೂಂದ್ರೆ,ಬಸವರಾಜ ಕಾಗಲೆ,ಲಕ್ಷ್ಮಣ ರಾಮನಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!