Bagalkot

ಬಾಗಲಕೋಟೆ ಗಣಿ ಇಲಾಖೆ ‘ಬ್ಲಾಸ್ಟಿಂಗ್’ ಕಳ್ಳಾಟ: ಅಕ್ರಮ ದಂಧೆಗೆ ಅಧಿಕಾರಿಗಳೇ ಕವಚ! ಸಾರ್ವಜನಿಕರ ಆಕ್ರೋಶ

Share

ಬಾಗಲಕೋಟೆಯಲ್ಲಿ ಗಣಿ ಅಧಿಕಾರಿಗಳ ಭ್ರಷ್ಟಾಚಾರದ ಪರಮಾವಧಿ ಬಯಲಾಗಿದೆ. ಮುರಾರ್ಜಿ ವಸತಿ ಶಾಲೆಯ ಪಕ್ಕದಲ್ಲೇ ನಡೆಯುತ್ತಿರುವ ಅಕ್ರಮ ಬ್ಲಾಸ್ಟಿಂಗ್ ದಂಧೆಯನ್ನು ಗ್ರಾಮಸ್ಥರು ಹಿಡಿದುಕೊಟ್ಟರೂ, ಅಧಿಕಾರಿಗಳು ಮಾತ್ರ ಗುತ್ತಿಗೆದಾರರ ಹಿತ ಕಾಯಲು ನಿಂತಿದ್ದಾರೆ. ಕಣ್ಣೆದುರೇ ಸಾಕ್ಷ್ಯಗಳಿದ್ದರೂ “ಅಕ್ರಮ ನಡೆದಿಲ್ಲ” ಎಂದು ವರದಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಈಗ ಜನಾಗ್ರಹ ಉಂಟಾಗಿದೆ.

ಮಕ್ಕಳ ಜೀವಕ್ಕಿಂತ ಹಣವೇ ದೊಡ್ಡದಾಯಿತೇ? ಬಾಗಲಕೋಟೆಯ ಮುರಾರ್ಜಿ ವಸತಿ ಶಾಲೆಯ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ ಬ್ಲಾಸ್ಟಿಂಗ್ ನಡೆಯುತ್ತಿದೆ. ಹಗಲಿನಲ್ಲಿ ಡ್ರಿಲ್ಲಿಂಗ್ ಮಾಡಿ ರಾತ್ರಿ ಹೊತ್ತು ಬ್ಲಾಸ್ಟಿಂಗ್ ಮಾಡುವ ದಂಧೆ ಅವ್ಯಾಹತವಾಗಿದೆ. ಇದರಿಂದ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮಸ್ಥರು ಸಾಕ್ಷ್ಯ ಸಮೇತ ಅಕ್ರಮವನ್ನು ಬಯಲಿಗೆಳೆದು, ಡ್ರಿಲ್ಲಿಂಗ್ ವಾಹನವನ್ನು ಹಿಡಿದುಕೊಟ್ಟಿದ್ದರು. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಷಣ್ಮುಖ ಅವರು, “ಬ್ಲಾಸ್ಟಿಂಗ್ ಕಂಡುಬಂದಿಲ್ಲ, ಕೇವಲ ಹೋಲ್ ಹಾಕಲಾಗಿದೆ” ಎಂಬ ವಿಚಿತ್ರ ಸಮರ್ಥನೆ ನೀಡಿ ವಾಹನ ಬಿಡುಗಡೆಗೆ ಆದೇಶಿಸಿದ್ದಾರೆ.

ಇಲಾಖೆಯ ಉಲ್ಟಾ ಹೊಡೆತ – ದಂಡ ಹಾಕಿದ್ದು ಯಾಕೆ? ಒಂದೆಡೆ ಅಕ್ರಮ ನಡೆದಿಲ್ಲ ಎನ್ನುವ ಅಧಿಕಾರಿಗಳು, ಇನ್ನೊಂದೆಡೆ ಅದೇ ವಾಹನಕ್ಕೆ 25 ಸಾವಿರ ರೂಪಾಯಿ ದಂಡ ವಿಧಿಸಿ ರಿಲೀಸ್ ಮಾಡಿದ್ದಾರೆ. “ಅಕ್ರಮ ಕಂಡುಬಂದಿಲ್ಲವೆಂದ ಮೇಲೆ ದಂಡ ಯಾಕೆ?” ಎಂಬುದು ಸಾರ್ವಜನಿಕರ ನೇರ ಪ್ರಶ್ನೆ. ಕೃಷಿ ಭೂಮಿ ಅಭಿವೃದ್ಧಿಗೆ ಡ್ರಿಲ್ಲಿಂಗ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ನಕಲಿ ಸರ್ಟಿಫಿಕೇಟ್ ಸೃಷ್ಟಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಈ ಕಳ್ಳಾಟದಿಂದಾಗಿ ಗ್ರಾಮಸ್ಥರ ಮನೆಗಳು ಬಿರುಕು ಬಿಡುತ್ತಿದ್ದು, ಬೋರ್‌ವೆಲ್‌ಗಳು ಬತ್ತಿ ಹೋಗುವ ಭೀತಿ ಎದುರಾಗಿದೆ.

Tags:

error: Content is protected !!