Dharwad

ಧಾರವಾಡ ಶಿವಾಜಿ ವೃತದ ಬಳಿಯ ಕಸಾಯಿಖಾನೆ ಬಂದ್ ಮಾಡಲು ಮುಂದಾದ ಪಾಲಿಕೆ…..ಮಟನ್ ವ್ಯಾಪಾರಸ್ಥರಿಂದ ತೀವ್ರ ವಿರೋಧ.

Share

ಅವು ಒಂದು ಕಾಲಘಟದಲ್ಲಿ ನಗರದ ಹೊರಗೆ ಇದ್ದ ಕಸಾಯಿಖಾನೆ ಹಾಗೂ ಮಟನ್ ಶಾಪ್‌ಗಳು. ಆದರೆ ಈಗ ಅವು ನಗರದ ಮಧ್ಯಭಾಗದಲ್ಲಿವೇ, ಕಸಾಯಿಖಾನೆಗಳ ದುರ್ವಾಸನೆ ಜತೆಗೆ ಸ್ಥಳೀಯ ನಗರದ ಕಾಲುವೆಗಳಲ್ಲಿ ರಕ್ತದ ನೀರು ಹರಿಯುತ್ತಿರುವುದಿ ಅಲ್ಲಿನ ನಿವಾಸಿಗಳಿಗೆ ನಿತ್ಯವು ನರಕ ದರ್ಶನವಾಗುತ್ತಿದೆ. ಜನ ಮನವಿ ಮೇರೆಗೆ ಈಗ ಪಾಲಿಕೆ ಅವುಗಳ ತೆರವಿಗೆ ಮುಂದಾಗಿದ್ದು, ಮಟನ್ ವ್ಯಾಪಾರಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಹೀಗೆ ಕಸಾಯಿಖಾನೆ ಮುಂದೆ ಜಮಾಯಿಸಿರುವ ಮಟನ್ ವ್ಯಾಪಾರಸ್ಥರು.. ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಜನ.. ಎಸ್ ಈ ಎಲ್ಲ ದೃಶ್ಯಗಳಿಗೆ ಧಾರವಾಡ ಶಿವಾಜಿ ವೃತದ ಬಳಿಯ ಮಟನ್ ಶಾಪ್‌ಗಳ ಆವರಣ ಸಾಕ್ಷಿಯಾಗಿತ್ತು. ಧಾರವಾಡದ ಮಟನ್ ವ್ಯಾಪಾರಸ್ಥರು. ಧಾರವಾಡದ ಶಿವಾಜಿ ವೃತ್ತದ ಬಳಿ ಇರುವ ಕಸಾಯಿಖಾನೆಯನ್ನು ಪಾಲಿಕೆ ಬಂದ್ ಮಾಡಿ ಅದನ್ನು ನೆಲಸಮಗೊಳಿಸಲು ಮುಂದಾಗಿತ್ತು. ಆದರೆ, ಮಟನ್ ವ್ಯಾಪಾರಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಜೆಸಿಬಿ ವಾಪಸ್ ಕಳುಹಿಸಿದ್ದಾರೆ. ಈ ಕಸಾಯಿಖಾನೆ ಬ್ರಿಟೀಷರ ಕಾಲದಲ್ಲೇ ಆರಂಭ ಆಗಿತ್ತು. ಆಗ ಊರ ಹೊರಗಿದ್ದ ಕಸಾಯಿಖಾನೆ ಈಗ ನಗರ ಬೆಳೆದಂತೆ ಈ ಕಸಾಯಿಖಾನೆ ನಗರದ ಮಧ್ಯೆಭಾಗದಲ್ಲೇ ಬಂದಿದೆ. ಇದರಿಂದ ಅಕ್ಕಪಕ್ಕದ ಜನರಿಗೆ ದುರ್ವಾಸನೆ ಬರುತ್ತಿದೆ, ಚರಂಡಿಯಲ್ಲಿ ರಕ್ತ ಹರಿಯುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಇದನ್ನು ಬಂದ್ ಮಾಡಲು ಪಾಲಿಕೆ ಮುಂದಾಗಿತ್ತು. ಆದರೆ, ತಮಗೆ ಬೇರೆ ಕಡೆ ಕಸಾಯಿಖಾನೆಗೆ ಮಹಾನಗರ ಪಾಲಿಕೆ ಜಾಗದ ವ್ಯವಸ್ಥೆ ಮಾಡಿಕೊಟ್ಟ ನಂತರ ಈ ಕಸಾಯಿಖಾನೆ ಬಂದ್ ಮಾಡಲಿ. ಅಲ್ಲಿಯವರೆಗೂ ಈ ಕಸಾಯಿಖಾನೆ ಬಂದ್ ಮಾಡದಂತೆ ಮಟನ್ ವ್ಯಾಪಾರಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಕೂಡ ಭೇಟಿ ನೀಡಿ ಪಾಲಿಕೆ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಗೋವುಗಳನ್ನು ವಧೆ ಮಾಡಲಾಗುತ್ತಿದೆ ಎಂದು ಬಜರಂಗದಳ ಕಾರ್ಯಕರ್ತರು ಅನೇಕ ಬಾರಿ ದಾಳಿ ಮಾಡಿದ್ದಾರೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಈ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ತಂದು ಕಡಿಯಲಾಗುತ್ತಿದೆ ಎಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿ ಅನೇಕ ಬಾರಿ ಈ ಕಸಾಯಿಖಾನೆ ಎದುರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಪಾಲಿಕೆ ಈ ಕಸಾಯಿಖಾನೆಯನ್ನು ಶಾಶ್ವತವಾಗಿ ಬಂದ್ ಮಾಡಲು ಹೊರಟಿದೆ. ಆದರೆ, ಮಟನ್ ವ್ಯಾಪಾರಸ್ಥರು ಮಾತ್ರ ತಮಗೆ ಊರ ಹೊರಗಡೆ ಜಾಗದ ವ್ಯವಸ್ಥೆ ಮಾಡಿಕೊಟ್ಟರೆ ಮಾತ್ರ ಈ ಕಸಾಯಿಖಾನೆ ಖಾಲಿ ಮಾಡುವುದಾಗಿ ಹೇಳುತ್ತಿದ್ದಾರೆ.

ಮೊನ್ನೆಯಷ್ಟೇ ಬಜರಂಗದಳ ಕಾರ್ಯಕರ್ತರು ಕಸಾಯಿಖಾನೆ ಮೇಲೆ ದಾಳಿ ನಡೆಸಿದ ನಂತರ ಈಗ ಎರಡ್ಮೂರು ದಿನಗಳಿಂದ ಮಟನ್ ವ್ಯಾಪಾರಸ್ಥರು ಕಸಾಯಿಖಾನೆ ಬಂದ್ ಮಾಡಿದ್ದಾರೆ. ಸದ್ಯ ಸ್ಥಳಕ್ಕೆ ಬಂದಿದ್ದ ಪಾಲಿಕೆಯ ಜೆಸಿಬಿಯನ್ನು ಮಟನ್ ವ್ಯಾಪಾರಸ್ಥರೇನೋ ಪಾಲಿಕೆ ಜೆಸಿಬಿ ಹೊರಳಿ ಕಳಿಸುವಲ್ಲಿ‌ಸಕ್ಸಸ್ ಆಗಿರಬಹುದು. ಆದರೆ ಇದಕ್ಕೆ ಬರೋ ದಿನಗಳಲ್ಲಿ ಪಾಲಿಕೆ‌ಯಾವ ರೀತಿಯ ಜೆಜ್ಜೆ ಇಡುತ್ತದೆ ಎಂಬುವುದನ್ನು‌ಕಾದು ನೋಡಬೇಕಿದೆ.

Tags:

error: Content is protected !!