Dharwad

ಹೋಳಿ-ರಂಜಾನ್ ಹಬ್ಬದ ಹಿನ್ನಲೆ, ಧಾರವಾಡ ಎಸ್ಪಿ ನೇತೃತ್ವದಲ್ಲಿ ಸಭೆ….

Share

ಬರುವ ಮಾರ್ಚ ತಿಂಗಳಲ್ಲಿ ಹಿಂದೂಗಳ ಹೋಳಿ ಹುಣ್ಣಿಮೆ ಹಬ್ಬ ಹಾಗೂ ಮುಸ್ಲಿಂ ಸಮುದಾಯದವರ ರಂಜಾನ್ ಹಬ್ಬ ಇರುವ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಎರಡು ಸಮುದಾಯ ಪ್ರಮುಖ‌ ಮುಖಂಡರ ಹಾಗೂ ಧರ್ಮದ ಗುರುಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದರು.

ವೈ- ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಭವನದಲ್ಲಿ ಎಸ್ಪಿ ಗುಂಜನ್ ಆರ್ಯ ಅವರ ನೇತೃತ್ವದಲ್ಲಿ ಹಿಂದೂ ಮುಸ್ಲಿಂ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಧಾರವಾಡ ಜಿಲ್ಲೆಯ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಧರ್ಮ ಗುರುಗಳು ಹಾಗೂ ಪ್ರಮುಖ‌ ಮುಖಂಡರು ಭಾಗಿಯಾಗಿದ್ದರು. ಸಭೆಯಲ್ಲಿ ಮುಖಂಡರ ಹಾಗೂ ಧರ್ಮಗುರುಗಳ ಸಲಹೆಗಳನ್ನು ಎಸ್ಪಿಯವರು ಆಲಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ಗುಂಜನ್ ಆರ್ಯ ಅವರು, ಇತ್ತೀಚೆಗೆ ಹಬ್ಬ ಹರಿದಿನಗಳಲ್ಲಿ ಸಮಾಜದ ಶಾಂತಿ ಸ್ವಾಸ್ಥ್ಯ ಕೆಡಿಸುವ ದುಷ್ಟ ಶಕ್ತಿಗಳು ಹೆಚ್ಚಾಗಿವೆ.‌ಹಲವು ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ.‌ ಆದರೆ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಎಂದಿಗೂ ನಡದಿಲ್ಲ, ನಮ‌್ಮ ಜಿಲ್ಲೆಯ ಹಿಂದೂ ಮುಸ್ಲಿಂರು ಒಟ್ಟಾಗಿ ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸುತ್ತಾ ಬರುತ್ತಿದ್ದಾರೆ.‌ ಈಗ ಮಾರ್ಚ ತಿಂಗಳಲ್ಲಿ ಎರಡು ಸಮುದಾಯದ ಹಬ್ಬಗಳು ಬಂದಿವೆ. ನಮ್ಮ ಜಿಲ್ಲೆಯ ಎಲ್ಲರೂ ಹಬ್ಬವನ್ನು ಸಂತೋಷವಾಗಿ ಹಾಗೂ ಇಯರೆ ಜಿಲ್ಲೆಯ ಜನರಿಗೆ ಮಾದರಿಯಾಗಿ ಆಚರಿಸೋಣ. ಯಾವುದೇ ಅಹಿಕತರ ಘಟನೆಗಳು ನಡೆಯೂ ಸೂಚನೆ ತಮ್ಮಗೆ ಸಿಕ್ಕಲ್ಲಿ ತ್ವರಿತವಾಗಿ ಇಲಾಖೆಗೆ ಗುಪ್ತವಾಗಿ ತಿಳಿಸಿ. ಯಾರಾದರೂ ಅಹಿತಕರ ಘಟನೆಗಳಿಗೆ ಮುಂದಾಗುತ್ತಿದ್ದರು ಹತ್ತಿರ ಠಾಣೆ ಅಥವಾ ನೇರವಾಗಿ ನಮ್ಮಗೆ ಮಾಹಿತಿ ನೀಡಿ, ಎಲ್ಲರೂ ಒಟ್ಟಾಗಿ ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು. ‌

Tags:

error: Content is protected !!