hubbali

ವಿದ್ಯಾರ್ಥಿಗಳ ರಾಜಕಾರಣ ಮಾಡೋ ಅವಶ್ಯಕತೆ ನಮಗಿಲ್ಲ: ಸರ್ಕಾರ ಕೂಡಲೇ ನೇಮಕ ಪ್ರಕ್ರಿಯೇ ನಡೆಸಬೇಕು : ಅರವಿಂದ ಬೆಲ್ಲದ

Share

ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕೋ ಕೆಲಸ ಸರ್ಕಾರ ಮಾಡಿತ್ತು. ವಿದ್ಯಾರ್ಥಿ ಗಳು ನಮ್ಮ ಹತ್ತಿರ ಬಂದು ಮನವಿ ಮಾಡಿದ್ರು.
ನಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ವಿದ್ಯಾರ್ಥಿಗಳ ಹೋರಾಟಕ್ಕೆ ನಾವು ಬೆಂಬಲ ವ್ಯಕ್ತಪಡಿಸಿದ್ದೇವೆ. ಇದರಲ್ಲಿ ರಾಜಕಾರಣ ಮಾಡೋ ಅವಶ್ಯಕತೆ ನಮಗಿಲ್ಲ ಎಂದು ವಿಧಾನ ಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,
ಆದಷ್ಟು ಬೇಗನೆ ಸರ್ಕಾರ ಹುದ್ದೆ ಭರ್ತಿ ಮಾಡಲಿ ಅನ್ನೋದು ನಮ್ಮ ಅಪೇಕ್ಷೆ. ಸಿದ್ದರಾಮಯ್ಯ ನವರು ಸುಳ್ಳು ಹೇಳಬಾರದು. ಸುಳ್ಳುರಾಮಯ್ಯ ಅಂತಾಗಬಾರದು. ನಲವತ್ತು ಸಾವಿರ ಹುದ್ದೆ ನೋಟಿಪಿಕೇಷನ್ ಮಾಡಿದ್ದೇವೆ ಅಂತ ಹೇಳ್ತಾರೆ. ವಿದ್ಯಾರ್ಥಿಗಳ ನೋವು ತಿಳಿದುಕೊಳ್ಳೋ ಕೆಲಸ ಸರ್ಕಾರ ಮಾಡಲಿ. ಹಿಂದಿನ ಸರ್ಕಾರ ಅಂತ ಆರೋಪ ಮಾಡೋದು ಬಿಡಲಿ ಎಂದರು.

ಹುದ್ದೆ ಭರ್ತಿ ಮಾಡುವ ವಿಚಾರದಲ್ಲಿ
ಕೇಂದ್ರ ಸರ್ಕಾರ ಏನು ಮಾಡಿದೆ ಎಂಬ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಕೇಂದ್ರ ಸರ್ಕಾರ ಕಳೆದ 11 ವರ್ಷದಲ್ಲಿ 7.30 ಲಕ್ಷ ಸರ್ಕಾರಿ ನೌಕರಿ ನೀಡಿದೆ. ಬೇರೆ ಬೇರೆ ಸಂಸ್ಥೆ ಮೂಲಕ ನೌಕರಿ ನೀಡೋ ಕೆಲಸ ಮಾಡ್ತಿದೆ. ಯುಪಿಎ ಸರ್ಕಾರದಲ್ಲಿ 2.90 ಲಕ್ಷ ಇಪಿಎಪ್ ಅಕೌಂಟ್ ಆಗಿದ್ದವು. ಮೋದಿ ಅಧಿಕಾರಕ್ಕೆ ಬಂದ ಮೇಲೆ 17 ಕೋಟಿ ಇಪಿಎಪ್ ಅಕೌಂಟ್ ಓಪನ್ ಆಗಿವೆ. ಸ್ಕಿಲ್ ಇಂಡಿಯಾ, ಸ್ಟಾರ್ಟಪ್ ಗಳ ಮೂಲಕ ಉದ್ಯೋಗ ಸೃಷ್ಟಿ ನಡೆದಿದೆ. ಕೇಂದ್ರ ಸರ್ಕಾರ ತನ್ನ ಕೆಲಸ ಮಾಡ್ತಿದೆ. ರಾಜ್ಯ ಮಾಡಬೇಕಾದ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿ ಎಂದರು.

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಅದಕ್ಕಾಗಿ ಹೊಸ ನೇಮಕಾತಿ ಮಾಡ್ತಿಲ್ಲ. ಧಾರವಾಡ ಹೋರಾಟ ಜೆನ್ ಜಿ ಹೋರಾಟ ಅರ್ಥ ಮಾಡಿಕೊಳ್ಳಿ. ರಾಹುಲ್ ಗಾಂಧಿಯವರೇ ಟೀ ಶರ್ಟ್ ಹಾಕಿಕೊಂಡು ಅಡ್ಡಾಡೋದಲ್ಲಾ.
ನಿಮ್ಮ ಸರ್ಕಾರಕ್ಕೆ ಭರ್ತಿ ನೇಮಕ ಮಾಡಿಕೊಳ್ಳಿ ಅಂತ ಹೇಳಿ. ವಿಧಾನಸಭೆಯೊಳಗೆ ಕೂಡಾ ಇದನ್ನು ಚರ್ಚೆ ಮಾಡ್ತೇವೆ ಎಂದರು.

ರಾಜ್ಯ ಸರ್ಕಾರ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ವಿಚಾರಕ್ಕೆ ಪ್ರತಿಕ್ರಯಿಸಿ,
ಈ ರೀತಿ ಒಣ ರಾಜಕಾರಣ ಮಾಡೋ ಅವಶ್ಯಕತೆ ಇಲ್ಲ.
ಉರ್ದು ಭಾಷಿಕರು ಇದ್ರೆ ಉರ್ದು ಜೊತೆ ಕನ್ನಡ ಕೂಡ ಹಾಕಲಿ.
ಅತಿಯಾದ ಓಲೈಕೆಯಿಂದ ಭಾಷಾ ಬಾಂಧವ್ಯ ಹಾಳು ಮಾಡಬಾರದು.
ಮೊದಲಿನಿಂದಲು ಜಗಳ ಹಚ್ಚೋ ಕೆಲಸ ಕಾಂಗ್ರೆಸ್ ಮಾಡ್ತಿದೆ.
ಆಡಳಿತ ಮರೆತು ರಾಜಕಾರಣ ಮಾಡಬಾರದು. ಮಾಡಿದ್ರೆ ಮುಂದೆ ಇವರು ಅಧಿಕಾರಕ್ಕೆ ಬರಲ್ಲ.
ಅವರೇ ನಮಗೆ ತಟ್ಟೆಯಲ್ಲಿ ಅಧಿಕಾರ ಇಟ್ಟು ಕೊಡ್ತಾರೆ ಎಂದರು.

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿ ಮುಖಂಡ ಕಾಂತಕುಮಾರ್, ನಿನ್ನೆ ಹೋರಾಟ ಮೊದಲನೇಯದಲ್ಲ.
ಧಾರವಾಡ ಸೇರಿ ಅನೇಕ ಕಡೆ ಹೋರಾಟ ಮಾಡಿದ್ದೇವೆ.
ರಾಜ್ಯದಲ್ಲಿರೋ 43 ಇಲಾಖೆಯಲ್ಲಿನ ಹುದ್ದೆ ಭರ್ತಿ ಮಾಡಲು ಆಗ್ರಹಿಸಿ ಹೋರಾಟ ಮಾಡಿದ್ದೇವೆ. ರಾಜ್ಯದಲ್ಲಿ 2.83 ಲಕ್ಷ ಹುದ್ದೆ ಖಾಲಿಯಿವೆ. ಕಳೆದ ಮೂರು ವರ್ಷದಲ್ಲಿ ಐದು ಸಾವಿರ ಹುದ್ದೆ ಕೂಡಾ ಭರ್ತಿ ಮಾಡಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ರ ಜೊತೆ ಚರ್ಚೆ ಮಾಡಿದ್ದೆವು. ಎರಡು ತಿಂಗಳು ಸಮಯ ನೀಡಿದ್ದೆವು. ಆದ್ರೆ ಇಲ್ಲಿವರಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಸರ್ಕಾರ ಮಾಡಿರೋ ಮಿಸ್ಟೇಕ್ ನಿಂದ ನೇಮಕಾತಿ ವಿಳಂಭವಾಗ್ತಿದೆ. ಹಣಕಾಸು ಇಲಾಖೆಯಿಂದ 56 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿ ಸಿಕ್ಕಿದೆ. ಆದ್ರೆ ಹುದ್ದೆ ಭರ್ತಿ ಮಾಡೋ ಕೆಲಸವಾಗ್ತಿಲ್ಲ ಎಂದರು.

ಮಾಧ್ಯಮದ ಮುಂದೆ ಸುಳ್ಳು ಹೇಳಿಕೆ ನೀಡ್ತಿದ್ದಾರೆ. ಸರ್ಕಾರದಲ್ಲಿ ಬರಿ ಟ್ವಿಟ್ ಮಾಡೋದನ್ನು ಬಿಡಿ.
ಆದಷ್ಟು ಬೇಗನೆ ಹುದ್ದೆ ಭರ್ತಿ ಮಾಡಿಲ್ಲ. ಒಂದು ವಾರದಲ್ಲಿ ನೇಮಕಾತಿ ನೋಟಿಪಿಕೇಷನ್ ಹೊರಡಿಸಬೇಕು‌.ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ. ಧಾರವಾಡ ದಿಂದ ಬೆಂಗಳೂರುವರಗೆ ಪಾದಯಾತ್ರೆ ಮಾಡ್ತೇವೆ ಎಂದರು.

Tags:

error: Content is protected !!