BELAGAVI

ಬೆಳಗಾವಿ – ಇಲಾಖೆಯ ತರಬೇತಿ ಪಡೆದ ಯುವಕರು ಭವಿಷ್ಯ ರೂಪಿಸಿಕೋಳ್ಳಿ – ಸದಾಶಿವ ಬಡಿಗೇರ.

Share

ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಮಾಗಿದರ್ಶಿ ತರಬೇತಿ ಪಡೆದ ಯುವಕರು ಭವಿಷ್ಯ ರೂಪಿಸಿಕೋಳ್ಳ ಬೇಕು ಎಂದು ಬೆಳಗಾವಿ ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಜಂಟಿ ನಿರ್ದೆಶಕ ಸದಾಶಿವ ಬಡಿಗೇರ ಹೇಳಿದರು.
2024 – 25 ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸಿ ಮಾರ್ಗದರ್ಶಿ ತರಬೇತಿ ಪಡೆದ ಬೆಳಗಾವಿ ಜಿಲ್ಲೆಯ 28 ಜನರಿಗೆ ಪ್ರವಾಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿತು.

ಬೆಳಗಾವಿ ಸುವರ್ಣ ಸೌಧದ ಮುಂಬಾಗದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನಿಂದ ಆಯ್ಕೆಯಾಗಿ ಯಶಸ್ವಿಯಾಗಿ ತರಬೇತಿ ಪಡೆದ ಯುವಕ ,ಯುವತಿಯರಿಗೆ ಪ್ರವಾಸಿ ಕಿಟ್ ಗಳನ್ನು ಉಚಿತವಾಗಿ ನೀಡಲಾಯಿತು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೆಶಕ ಸದಾಶಿವ ಬಡಿಗೇರ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯ್ದ ಫಲಾನುಭವಿಗಳಿಗೆ ಒಂದು ತಿಂಗಳು ವಿಷೇಶ ತರಬೇತಿ ನೀಡಿ ಇಂದು ಇಲಾಖೆ ವತಿಯಿಂದ ಪ್ರವಾಸಿ ಕಿಟ್ ವಿತರಿಸಲಾಗಿದೆ, ಮುಂಬರುವ ದಿನಗಳಲ್ಲಿ ತರಬೇತಿ ಪಡೆದವರು ಆಯಾ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದರು
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಾದ ಪ್ರವೀಣ ಕೇಳಗಡೆ, ಸೀಮಾ ಗೌಡರ, ಶಶಾಂಕ ಹಿರೇಮಠ, ಕೀರ್ತಿ ಸೊಂಟಕ್ಕಿ, ರತ್ನಪ್ಪಾ ಶೇಟ್ಟಿಮನಿ, ಉಪಸ್ಥಿತರಿದ್ದರು.

ದೇಶದ ಅತಿ ಹೇಚ್ಚು ಆದಾಯ ನೀಡುವ ಪ್ರವಾಸೋದ್ಯಮ ಘಟಕದಲ್ಲಿ ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರುದ್ಯೋಗಿ ಯುವಕ, ಯುವತಿಯರಿಗೆ ಪ್ರವಾಸಿ ಮಾರ್ಗದರ್ಶಿ ತರಬೇತಿ ನೀಡುವದು ಶ್ಲಾಘನಾರ್ಹ ಆದರೆ ತರಬೇತಿ ಪಡೆದ ಯುವಕರಿಗೆ ಆಯಾ ತಾಲೂಕಿನ ಪ್ರವಾಸಿ ತಾಣಗಳಲ್ಲಿ ತಾತ್ಕಾಲಿಕ ಉದ್ಯೋಗ ನೀಡಿ ಗೌರವ ಧನ ಅಥವಾ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿದರೆ ಮಾತ್ರ ಸರ್ಕಾರ ನಿರುದ್ಯೋಗಿಗಳಿಗೆ ನೀಡುವ ತರಬೇತಿ ಫಲಪ್ರದವಾಗಲಿದೆ ಎಂದು ಜನರ ಅಭಿಪ್ರಾಯವಾಗಿದೆ.

Tags:

error: Content is protected !!