Belagavi

ಬೆಳಗಾವಿಗೆ ‘ಸಿಟಿಸ್ 2’ ಯೋಜನೆ ಕೈ ತಪ್ಪದಂತೆ ಕ್ರಮ: ಪ್ರಾದೇಶಿಕ ಆಯುಕ್ತರಿಂದ ಸಿಟಿಜನ್ಸ್ ಕೌನ್ಸಿಲ್‌ಗೆ ಭರವಸೆ

Share

1. ಬೆಳಗಾವಿ ‘ಸಿಟಿಸ್ 2’ ಯೋಜನೆಗೆ ಮರುಜೀವ.
2. ಪ್ರಾದೇಶಿಕ ಆಯುಕ್ತರನ್ನ ಭೇಟಿ ಮಾಡಿದ ಸಿಟಿಜನ್ಸ್ ಕೌನ್ಸಿಲ್.
3. ಪ್ರತಿಷ್ಠಿತ ಕೇಂದ್ರ ಸರ್ಕಾರದ ಯೋಜನೆಯಲ್ಲಿ ವಿಳಂಬ.
4. ಬೆಳಗಾವಿಯಲ್ಲೇ ಯೋಜನೆ ಜಾರಿಗೆ ಅಧಿಕಾರಿಗಳ ಪಟ್ಟು.

ಬೆಳಗಾವಿಯ ಜವಾಬ್ದಾರಿಯುತ ನಾಗರಿಕರ ವೇದಿಕೆಯಾದ ‘ಸಿಟಿಜನ್ಸ್ ಕೌನ್ಸಿಲ್’ ವತಿಯಿಂದ ಇಂದು ಪ್ರಾದೇಶಿಕ ಆಯುಕ್ತೆ ಎಂ.ಎಸ್. ಜಾನಕಿ ಕೆ.ಎಂ. ಅವರನ್ನು ಭೇಟಿ ಮಾಡಿ, ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಸಿಟಿಸ್ 2’ ಯೋಜನೆಯ ಅನುಷ್ಠಾನದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ತಾಂತ್ರಿಕ ಕಾರಣಗಳು ಹಾಗೂ ಪ್ರಕ್ರಿಯೆಗಳ ವಿಳಂಬದಿಂದಾಗಿ ಈ ಬೃಹತ್ ಯೋಜನೆ ಬೆಳಗಾವಿಯಿಂದ ಬೇರೆ ನಗರಕ್ಕೆ ವರ್ಗಾವಣೆಯಾಗುವ ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ಸತೀಶ್ ತೆಂಡೂಲ್ಕರ್ ನೇತೃತ್ವದ ನಿಯೋಗವು, ಬೆಳಗಾವಿಯ ಸುಸ್ಥಿರ ಅಭಿವೃದ್ಧಿಗೆ ಈ ಯೋಜನೆ ಎಷ್ಟು ಅವಶ್ಯಕ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು.
ಪ್ರತಿನಿಧಿಗಳ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು, ಯೋಜನೆಯನ್ನು ಬೆಳಗಾವಿಯಲ್ಲೇ ಉಳಿಸಿಕೊಳ್ಳಲು ಮತ್ತು ಆದಷ್ಟು ಬೇಗ ಜಾರಿಗೆ ತರಲು ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ, ಯೋಜನೆಯು ವರ್ಗಾವಣೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಿಟಿಜನ್ಸ್ ಕೌನ್ಸಿಲ್ ಅಧ್ಯಕ್ಷ ಸತೀಶ್ ತೆಂಡೂಲ್ಕರ್, ಪ್ರಮುಖರಾದ ಬಸವರಾಜ ಜವಳಿ, ಕಮಲೇಶ್ ಖೋಡಾ, ನಿತೇಶ್ ಜೈನ್, ವಿಕಾಸ್ ಕಳಗಟ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!