1. ಬೆಳಗಾವಿಯಲ್ಲಿ ಕ್ವಾಲಿಟಿ ಪ್ರೀಮಿಯರ್ ಲೀಗ್ ಸಕ್ಸಸ್.
2. ರೋಚಕ ಫೈನಲ್ನಲ್ಲಿ ರೈಸಿಂಗ್ ಸ್ಟಾರ್ಗೆ ಜಯ.
3. ರಾಯಲ್ ಚಾಲೆಂಜರ್ಸ್ ಬೆಲಚಿಕ್ ತಂಡಕ್ಕೆ ರನ್ನರ್ ಅಪ್.
4. ಎಂಟು ತಂಡಗಳ ನಡುವೆ ನಡೆದ ಭರ್ಜರಿ ಕದನ.

ಬೆಳಗಾವಿಯ ಕ್ವಾಲಿಟಿ ಅನಿಮಲ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಆಯೋಜಿಸಲಾಗಿದ್ದ ‘ಕ್ವಾಲಿಟಿ ಪ್ರೀಮಿಯರ್ ಲೀಗ್’ ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಂಡೋಳಿ ರಸ್ತೆಯ ಲೋಟಸ್ ಕೌಂಟಿಯ ಟರ್ಫ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರೈಸಿಂಗ್ ಸ್ಟಾರ್ ತಂಡವು ಅದ್ಭುತ ಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿದಿದೆ.
ಲೋಟಸ್ ಕೌಂಟಿಯ ಸಕ್ಷಮ್ ಟರ್ಫ್ ಮೈದಾನದಲ್ಲಿ ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಅತ್ಯಂತ ಕುತೂಹಲಕಾರಿಯಾಗಿದ್ದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಲಚಿಕ್ ತಂಡದ ವಿರುದ್ಧ ರೈಸಿಂಗ್ ಸ್ಟಾರ್ ತಂಡವು 3 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ತಂಡವು ನಿಗದಿತ 6 ಓವರ್ಗಳಲ್ಲಿ 51 ರನ್ಗಳ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ರೈಸಿಂಗ್ ಸ್ಟಾರ್ ತಂಡವು ಕೇವಲ 5.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 52 ರನ್ ಗಳಿಸುವ ಮೂಲಕ ವಿಜಯೋತ್ಸವ ಆಚರಿಸಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಕಂಪನಿಯ ನಿರ್ದೇಶಕ ಸಂಜೀವ್ ದೇಶಪಾಂಡೆ, ಸಿಇಒ ಸಚಿನ್ ನಂದಾ, ಜನರಲ್ ಮ್ಯಾನೇಜರ್ ಸತೀಶ್ ದೇಶಪಾಂಡೆ, ವಿನಾಯಕ ಸುಭೇದಾರ್ ಹಾಗೂ ಇಮ್ರಾನ್ ಅತ್ತಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಜೇತ ಮತ್ತು ರನ್ನರ್ ಅಪ್ ತಂಡಗಳಿಗೆ ಆಕರ್ಷಕ ಟ್ರೋಫಿ, ಪದಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಈ ಪಂದ್ಯಾವಳಿಯಲ್ಲಿ ಸುನಿಲ್ ದೇಸಾಯಿ ಅಂಪೈರ್ ಆಗಿ, ಪ್ರವೇಶ ಪಾಟೀಲ್ ಸ್ಕೋರರ್ ಆಗಿ ಮತ್ತು ಪ್ರಮೋದ್ ಜಪೆ ಅವರು ನಿರೂಪಕರಾಗಿ ಕಾರ್ಯನಿರ್ವಹಿಸಿದರು.
