ಬರುವ ೨೦೨೮ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾಗವಾಡ ಕ್ಷೇತ್ರದ ಅಭ್ಯರ್ಥಿ ಆಗಿ ನಾನೇ ಸ್ಪರ್ಧಿಸುತ್ತೇನೆ ಎಂದು ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದರು.
ಸೋಮವಾರ ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಶಾಸಕ ರಾಜು ಕಾಗೆ ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಲ ದಿನಗಳಿಂದ ಬೇರೆಯವರು ನನ್ನ ಅನಾರೋಗ್ಯ ಬಗ್ಗೆ ವಹಾಪೋಹ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಯಾವುದೇ ಆರೋಗ್ಯದ ತೊಂದರೆ ಇಲ್ಲ. ನನ್ನ ಕಾಲಿನ ಬೆರಳಿಗೆ ಪೆಟ್ಟು ಬಿದ್ದಿದೆ ಸ್ವಲ್ಪ ನೋವಾಗಿದೆ ಅಷ್ಟೇ. ನನಗೇನು ಕ್ಯಾನ್ಸರ್ ಆಗಿಲ್ಲ, ನಾನು ಆರೋಗ್ಯದಿಂದ ಗಟ್ಟಿಯಾಗಿದ್ದೇನೆ ನನ್ನ ಕಾಳಜಿ ನಿಮಗೆ ಬೇಡ ಎಂದು ವಿರೋಧಕರಿಗೆ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ತಮ್ಮ ಹೇಳಿಕೆಗಳು ಹಂಚಿಕೊಳ್ಳಲು ಯಾರದೇ ಅಡ್ಡಿ ಇಲ್ಲ ಆದರೆ ಏನೋ ಒಂದು ಸೃಷ್ಟಿ ಮಾಡುವುದು ಸರಿಯಲ್ಲ ಎಂದು ಹೇಳಿ, ಬರುವ ಚುನಾವಣೆಯಲ್ಲಿ ಮತ್ತೆ ನಾನೇ ಇದ್ದೇನೆ ಎಂದರು.
ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ ಇದರಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡಿದ್ದೇನೆ ಬರುವ ಕೆಲವು ದಿನಗಳಲ್ಲಿ ಕೆರೆ ತುಂಬು ಯೋಜನೆಗಳು ಕೈಗೊಳ್ಳುತ್ತೇನೆ. ಸದ್ಯಕ್ಕೆ ಮಾರ್ಚ್ ೬ ರಿಂದ ೨೭ ರವರೆಗೆ ಅದಿವೇಶನ ಜರುಗುತ್ತಿದ್ದು, ಅದರ ಬಳಿಕ ಉಳಿದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತೇನೆ ಎಂದು ಹೇಳಿದರು.
