Kagawad

ಕಾಗವಾಡ ಶಾಸಕ ರಾಜು ಕಾಗೆ ಇವರಿಂದ ೧೮ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಪೂಜೆ.

Share

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರು ಕಾಗವಾಡ ಮತಕ್ಷೇತ್ರದ ವಿಶೇಷ ಅಭಿವೃದ್ಧಿ ಕಾಮಗಾರಿಗಳಾಗಿ ೫೦ ಕೋಟಿ ಅನುದಾನ ಮುಂಜೂರು ಗೊಳಿಸಿದ್ದಾರೆ ಇದರಲ್ಲಿಯ ೩೬ ಕೋಟಿ ಲೋಕೋಪಯೋಗಿ ಇಲಾಖೆಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರುಗೊಳಿಸಿದ್ದು ಇವತ್ತು ೧೮ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.

ಸೋಮವಾರ ರಂದು ಬೆಳಗ್ಗೆ ಶಿರಗುಪ್ಪಿ ಗ್ರಾಮದಲ್ಲಿ ಶಿರುಗುಪ್ಪಿ -ಮಂಗಾವತಿ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ ಐದು ಕೋಟಿ ರೂಪಾಯಿ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ. ಈ ಕಾಮಗಾರಿ ಗುತ್ತಿಗೆದಾರರಾದ ವಿಜಯ್ ಮಾಳಿ, ಅಜಯ್ ಮಾಳಿ, ಕಾಮಗಾರಿ ಕೈಗೊಳ್ಳಿದ್ದಾರೆ.
ಕಾರ್ಯಕ್ರಮದಲ್ಲಿ ಕಾಗವಾಡ ಘಟಕದ ಕಾಂಗ್ರೆಸ್ ಪಕ್ಷ ಅಧ್ಯಕ್ಷ ವಿಜಯ ಅಕಿವಾಟೆ, ಸುರೇಶ್ ಚೌಗುಲೆ, ಮಹಾದೇವ ಪಾಟೀಲ್, ರಾಜು ಚೌಗುಲೆ, ಅನಿಲ್ ಚೌಗುಲೆ, ಗೌಂಡಿ ಸೈಯದ್, ಸಂದೀಪ್ ಕೋಳಿ ಸೇರಿದಂತೆ ಅನೇಕರು ಇದ್ದರು.

ನಿಪ್ಪಾಣಿ-ಕೊಟ್ಟಲಗಿ ರಾಜ್ಯ ಹೆದ್ದಾರಿ ಮಾರ್ಗದ ಉಗಾರ-ಕುಸನಾಳ ಮಧ್ಯದ ರಸ್ತೆ ಅಭಿವೃದ್ಧಿಗಾಗಿ ಎರಡು ಕೋಟಿ ರೂಪಾಯಿ ಕಾಮಗಾರಿಗೆ ಪೂಜೆ ನಿರ್ವಹಿಸಲಾಗಿದೆ,
ಇದೇ ರೀತಿ ಐನಾಪುರ-ಶೇಡವಾಳ-ಶಿರಗುಪ್ಪಿ ಈ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ ೪ ಕೋಟಿ ಐನಾಪುರ್ ಹುಲಗಬಾಳಿ ಈ ಮಾರ್ಗದ ರಸ್ತೆ ಅಭಿವೃದ್ಧಿಗಾಗಿ ಎರಡು ಕೋಟಿ, ರೂಪಾಯಿ.
ಮೋಳೆ-ತಂಗಡಿ ಈ ಮಾರ್ಗದ ಮಧ್ಯದ ರಸ್ತೆ ಅಭಿವೃದ್ಧಿಗಾಗಿ, ೨.೪೦ ಕೋಟಿ ರೂಪಾಯಿ ಹೀಗೆ ೧೮ ಕೋಟಿ ರೂಪಾಯಿ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ ನೀಡಿದರು.

ಉಗಾರದ ಸಮಾರಂಭದಲ್ಲಿ ವಿಪುಲ್ ಪಾಟೀಲ್, ರಜನಿಕಾಂತ ಶಹಾ, ಡಾಕ್ಟರ್ ರಾಜು ಪಾಟೀಲ್, ಅಣ್ಣಾಸಾಹೇಬ್ ಖೋತ್, ಭರತೇಶ್ ಉಪಾಧ್ಯ, ಸುರೇಶ್ ಸಮಾಜನವರ, ಮಹೇಶ್ ಕುಸನಾಳೆ.
ಐನಾಪುರನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ ಶ್ರೀಮತಿ ಪ್ರೇಮಲತಾ ರೆಡ್ಡಿ, ಪಟ್ಟಣ ಪಂಚಾಯಿತಿ ಸದಸ್ಯ ಪ್ರವೀಣ್ ಗಾಣಿಗೇರ್, ಅರುಣ್ ಗಾಣಿಗೇರ್, ಸಂಜಯ್ ಬಿರಡಿ, ಪ್ರಕಾಶ್ ಕೊರಬು, ಡಾಕ್ಟರ್ ಅರವಿಂದ್ ಕಾರ್ಚಿ, ಸಂಜು ಕುಸನಾಳೆ. ಮೋಳೆ ಗ್ರಾಮದ ಸಮಾರಂಭದಲ್ಲಿ ವಿನೋದ್ ಕೋಳೇಕರ್ ಸಿದ್ದಪ್ಪಾ ಕನಾಳ, ಬಾಳಪ್ಪಾ ಎರಂಡೂಲೆ, ಹನುಮಂತ ಬಣಚೋಡ, ಸುರೇಶ್ ಕೋಳೇಕರ್, ಧರ್ಮಾಜಿ ಕೋಳೆಕರ್, ಅಶೋಕ್ ಹುಗ್ಗಿ, ಗುತ್ತಿಗೆದಾರ ಪರಶುರಾಮ್ ಪಾಟೀಲ್, ಸೇರಿದಂತೆ ಅನೇಕರು ಇದ್ದರು.

Tags:

error: Content is protected !!