ಉತ್ತಮ ಆರೋಗ್ಯವಂತಾಗಿರಲು ನಮ್ಮ ಪರಿಸರ ಸ್ವಚ್ಚತೆಗೆ ಗಮನ ಹರಿಸುವದು ಅವಶ್ಯಕವಾಗಿದೆ ಎಂದು ಹುಕ್ಕೇರಿ ಸಂತ ನಿರಂಕಾರಿ ಪ್ರಚಾರಕ ಮಾರುತಿ ಮೊರೆ ಹೇಳಿದರು.
ಹುಕ್ಕೇರಿ ನಗರ ಮತ್ತು ವಿಭಾಗಿಯ ಸಂತ ನಿರಂಕಾರಿ ಮಂಡಳಿ ಸದಸ್ಯರು ಮತ್ತು ಬೆಳಗಾವಿ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನದ ಆವರಣ ಹಾಗೂ ಹಿರಣ್ಯಕೇಶಿ ನದಿ ದಡದಲ್ಲಿ ” ಸ್ವಚ್ಚ ಜಲ ಸ್ವಚ್ಚ ಮನ ” ಎಂಬ ವೇದ ಘೋಷನೆ ಅಡಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಜರುಗಿತು.


ನಿರಂಕಾರಿ ಮಂಡಳಿ ಸೇವಾದಳ ಸದಸ್ಯರು ನದಿ ದಡದಲ್ಲಿಯ ತ್ಯಾಜ್ಯ, ಕೋಳಚೆ ಪ್ರದೇಶ ಸ್ವಚ್ಚ ಗೋಳಿಸಿ ವಿಲೇವಾರಿ ಮಾಡಿದರು.
ನಂತರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ರಾಯಭಾಗ, ಕಂಚಕರವಾಡಿ, ಮೊರಬ, ದಡ್ಡಿ, ಬಾವನ ಸೌದತ್ತಿ, ನಿಲಜಿ, ಭಾವಚಿ, ಹುಕ್ಕೇರಿ ನಿರಂಕಾರಿ ಮಂಡಳಿ ಸದಸ್ಯರು ಭಾಗವಹಿಸಿ ಸತ್ಸಂಗ ಜರುಗಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ಜ್ಞಾನ ಪ್ರಚಾರಕ ಮಾರುತಿ ಮೊರೆ ಸಂತ ನಿರಂಕಾರಿ ಮಂಡಳಿ ಮತ್ತು ಚಾರಿಟಬಲ್ ಟ್ರಸ್ಟ ವತಿಯಿಂದ ಹರದೇವ ಸಿಂಗ ಮಹಾರಾಜ ಮತ್ತು ಮಾತಾ ಸುಧೀಕ್ಷಾ ರವರ ಸ್ವಚ್ಚ ಜಲ ಸ್ವಚ್ಚ ಮನ ಎಂಬ ಘೋಷನೆ ಅಡಿಯಲ್ಲಿ ಕರ್ನಾಟಕ ಜೋನಲ್ ಮುಖ್ಯಸ್ಥ ಸುನಿಲಕುಮಾರ ನಾತ್ರಾ ರವರ ಆದೇಶದಂತೆ ಇಂದು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೋಳೆಮ್ಮಾ ದೇವಸ್ಥಾನದ ಆವರಣ ಹಾಗೂ ನದಿ ದಡದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಪರಿಸರ ಸ್ವಚ್ಚ ವಾಗಿದ್ದರೆ ನಾವು ಆರೋಗ್ಯವಂತರಾಗ ಬಹುದು ಎಂದರು
ಬೆಳಗಾವಿ ಗೋಗಟೆ ಮಹಾವಿದ್ಯಾಲಯ ಉಪನ್ಯಾಸಕ ರಾಜಪುತ್ ಮಾತನಾಡಿ ನಮ್ಮ ಮಹಾವಿದ್ಯಾಲಯ ಎನ್ ಎಸ್ ಎಸ್ ವಿದ್ಯಾರ್ಥಿಗಳು ಕಳೆದ 7 ದಿನಗಳಿಂದ ಹೋಳೆಮ್ಮಾ ದೇವಸ್ಥಾನದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಇಂದು ನಿಕಾರಿ ಮಂಡಳಿ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಅವಕಾಶ ಲಭಿಸ೭ದ್ದಕ್ಕೆ ಧನ್ಯವಾದ ಹೇಳಿದರು..

ಈ ಸಂದರ್ಭದಲ್ಲಿ ಹುಕ್ಕೇರಿ ವಿಭಾಗಿಯ ಸಂಯೋಜಕರಾದ
ಭಾಗೋಜಿ ಕಾಲುಂಗಡ, ಅಮರಸಿಂಗ ಪಾಟೀಲ, ಮಹಾದೇವ ಹೊನಕುಪ್ಪಿ, ಕಲ್ಲಪ್ಪಾ ನಾಯಿಕ, ಅಜೀತ ದರೂರ, ಸದಾಶಿವ ದೇಸಾಯಿ, ಶ್ರೀನಿವಾಸ ಭೋವಿ ಮತ್ತು ಹುಕ್ಕೇರಿ ನಗರದ ನಿರಂಕಾರಿ ಮಂಡಳಿ ಸದಸ್ಯರಾದವ ಭರಮಣ್ಣಾ ಜಾಧವ, ಸಿದ್ದು ಬೆನಾಡಿಕರ,ಅಶೋಕ ಕಲಾಜ, ಕೆಂಣ್ಣಾ ಬಲೆ, ಕಲಗೌಡಾ ಪಾಟೀಲ, ಸಂಜೀವ ತಿಬಲೆ, ರಮೇಶ ಭೋವಿ, ದಯಾನಂದ ಮುರಗುಡೆ, ಸಾಯಿಕುಮಾರ ಚವ್ಹಾನ, ಸದೀಪ ಸೂರ್ಯವಂಶ, ರವಿ ಕದಂ, ದೇವರಾಜ ಜಾಧವ, ಗಣೇಶ ಪಾಟೀಲ, ರಾಮು ಕಾಲುಂಗಡಾ ಮೊದಲಾದವರು ಉಪಸ್ಥಿತರಿದ್ದರು.
