Dharwad

ಸಿಎಂ ಖುರ್ಚಿ ಜಗಳದಿಂದ ರಾಜ್ಯವೇ ಬಡವಾಗಿದೆ -ವಿಪಕ್ಷ ಉಪನಾಯಕ ಬೆಲ್ಲದ

Share

ಸಿಎಂ ಖುರ್ಚಿ ಜಗಳದಿಂದಾಗಿ ಇಡೀ ರಾಜ್ಯ ಸದ್ಯ ಬಡವಾಗಿದೆ. ಎಲ್ಲಿಯವರೆಗೂ ಈ ಖುರ್ಚಿ ಜಗಳ ಮುಗಿಯುವುದಿಲ್ಲವೋ ಅಲ್ಲಿಯವರೆಗೂ ಈ ರಾಜ್ಯ ಬಡವಾಗಿಯೇ ಇರುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಡಿಕೆಶಿಗೆ. ಅದು ಅವರಿಗೂ ಗೊತ್ತಿದೆ ಎಂದರು. ಶಿರಹಟ್ಟಿ ಶಾಸಕ ಲಮಾಣಿ ಮೇಲೆ ಲೋಕಾ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಾರ್ವಜನಿಕ ಜೀವನದಲ್ಲಿ ಇರುವವರು ಪ್ರಶ್ನಾತೀತವಾಗಿರಬೇಕು. ನೈತಿಕವಾಗಿ ನೈತಿಕತೆ ಉತ್ತಮವಾಗಿರಬೇಕು. ಶಿರಹಟ್ಟಿ ಶಾಸಕರ ಮೇಲೆ ಆದ ದಾಳಿ ಷಡ್ಯಂತ್ರ ಎಂದು ಕೇಳಿ ಬಂದಿದೆ. ಲೋಕಾಯುಕ್ತ ಸಂಸ್ಥೆಯ ಯಾವುದೇ ಒತ್ತಡ ಇಲ್ಲದೇ ತನಿಖೆ ಮಾಡಲಿ. ತಪ್ಪು ಇದ್ದರೆ ಶಿಕ್ಷೆ ಆಗಲಿ, ತಪ್ಪು ಇರದಿದ್ದರೆ ಅವರು ದೋಷಮುಕ್ತರಾಗಿ ಹೊರ ಬರಲಿ. ಟಾರ್ಗೆಟ್ ಮಾಡಿ ದಾಳಿ ಮಾಡಿಸುವುದು ಸರಿಯಲ್ಲ ಎಂದರು.

Tags:

error: Content is protected !!