ಬೆಳಗಾವಿಯ ಮರಾಠಾ ಮಂಡಳ ಪಾಲಿಟೆಕ್ನಿಕ್ನ ISTE ವಿದ್ಯಾರ್ಥಿ ವಿಭಾಗದ ವತಿಯಿಂದ ಫೆಬ್ರವರಿ 21, 2026 ರಂದು ಹಮ್ಮಿಕೊಳ್ಳಲಾಗಿದ್ದ “ಇಗ್ನೈಟ್-2026” ಅಂತರ ವಿಭಾಗೀಯ ಯೋಜನಾ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಕಾಲೇಜಿನ ಪ್ರಾಚಾರ್ಯ ರವಿಕುಮಾರ್ ಎಸ್. ಸೂರ್ಯವಂಶಿ ಹಾಗೂ ISTE ವಿದ್ಯಾರ್ಥಿ ವಿಭಾಗದ ಅಧ್ಯಕ್ಷೆ ಎಸ್. ಎ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ನವೀನ ತಾಂತ್ರಿಕ ಮಾದರಿಗಳನ್ನು ಪ್ರದರ್ಶಿಸಿದರು.
ಪ್ರದರ್ಶನಕ್ಕೆ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪಾಂಡುರಂಗ ಪಿಂಗಾಟ್ (ಆಟೋಮೊಬೈಲ್), ಸಿ. ಎಸ್.

ದೇಶಪಾಂಡೆ (ಸಿವಿಲ್), ಮಹೇಶ್ ಜವಳಕರ್ (ಇ & ಸಿ), ಸಂಜೀವ್ ಸೊನ್ನದ (ಮೆಕ್ಯಾನಿಕಲ್), ರವೀಂದ್ರ ಮೋಟಾರ್ (ಸಿ.ಎಸ್), ಪಾಕಿಜಾ ಜುನೇದಿ (ಇ & ಇ) ಹಾಗೂ ಇನ್ನೋವೇಟಿವ್ ಕೌನ್ಸಿಲ್ ಅಧ್ಯಕ್ಷೆ ಗೌರಿ ಉಪ್ಪಿನ್ ಆಗಮಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.ಮರಾಠಾ ಮಂಡಳ ಸೆಂಟ್ರಲ್ ಹೈಸ್ಕೂಲ್, ಜೀಜಾಮಾತಾ

ಹೈಸ್ಕೂಲ್ ಹಾಗೂ ಚವಟ ಗಲ್ಲಿಯ ಮರಾಠಾ ಮಂಡಳ ಹೈಸ್ಕೂಲ್ನ ವಿದ್ಯಾರ್ಥಿಗಳು ಭೇಟಿ ನೀಡಿ ಮಾದರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ರವಿಕುಮಾರ್ ಎಸ್. ಸೂರ್ಯವಂಶಿ

ಅವರು ಡಿಪ್ಲೊಮಾ ಶಿಕ್ಷಣದ ಪ್ರಾಮುಖ್ಯತೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ವಿವರಿಸಿದರು. ISTE ತಂಡ, ವಿಭಾಗೀಯ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಯಿತು
