Dharwad

ಧಾರವಾಡದ ರಾಮಾಪುರ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಬಸವಣ್ಣ ರಥೋತ್ಸವ…

Share

ಧಾರವಾಡ ಜಿಲ್ಲೆಯ ರಾಮಾಪುರ ಗ್ರಾಮದಲ್ಲಿ ಶ್ರೀ ಬಸವಣ್ಣ ಜಾತ್ರೆ ಹಾಗೂ ರಥೋತ್ಸವವು ಅದ್ದೂರಿಯಾಗಿ ಜರುಗಿತು. ರಾಮಾಪುರ ಸೇರಿ ಅಕ್ಕಪಕ್ಕದ ಗ್ರಾಮಸ್ಥರೆಲ್ಲರು ಒಗಟ್ಡಿನಿಂದ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀ ಬಸವಣ್ಣ ಮೂರ್ತಿಗೆ ಸೇರಿ ರಥೋತ್ಸದಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.

ವೈ- ಕಳೆದ 28 ವರ್ಷದಿಂದ ರಾಮಾಪುರ ಗ್ರಾಮದ ಶ್ರೀ ಬಸವಣ್ಣ ಜಾತ್ರೆಯನ್ನು ಗ್ರಾಮಸ್ಥರೆಲ್ಲರು ಒಟ್ಟಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದು, ಗ್ರಾಮದ ಪ್ರಸಕ್ತ ವರ್ಷದ ಮೊದಲ ಬಸವಣ್ಣ ಜಾತ್ರೆ ನಡೆಸಲಾಗಿದ್ದು, ಮುಂಜಾನೆಯಿಂದಲೇ ಶ್ರೀ ಬಸವಣ್ಣ ಮೂರ್ತಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡಿಗೊಂಡರು. ದೇವಸ್ಥಾನ ಆಡಳಿತ ಮಂಡಳಿಯಿಂದ ಮುಂಹಾನೆಯಿಂದ ಸಂಜೆಯವರೆಗೆ ಜಾತ್ರೆಗೆ ಬಂದಂತಹ ಭಕ್ತರಿಗೆ ಅನ್ನಪ್ರಸಾದ್ ವ್ಯವಸ್ಥೆಯು ಮಾಡಲಾಗಿತ್ತು. ಸಂಜೆ ರಥೋತ್ಸವ ಜರುಗಿದ್ದು, ದೇವಸ್ಥಾನದಿಂದ ಸುಮಾರು ಐದುನೂರು ಮೀಟರ್ ರಥವನ್ನು ಎಳೆಯಲಾಯಿತ್ತು. ಬಸವಣ್ಣ ರಥ ಬರುತ್ತಿದಂತೆ ಗ್ರಾಮದ ಮಹಿಳೆಯರು ಸೇರಿದಂತೆ ಅಕ್ಕಪಕ್ಕದ ಗ್ರಾಮದವರು ವಿಶೇಷ ಪೂಜೆ ಸಲ್ಲಿಸಿ ದೇವರ ಅರ್ಶೀವಾದಕ್ಕೆ ಪ್ರಾರ್ಥನೆ ಮಾಡಿದರು.‌ ರಾಮಾಪುರ ಗ್ರಾಮದ ವರ್ಷದ ಮೊದಲ ಬಸವಣ್ಣ ಜಾತ್ರೆ ಮಾಡಿರುವುದು ವಿಶೇಷವಾಗಿದ್ದು, ಬಸವಣ್ಣ ಜಾತ್ರೆಗೆ ಭಕ್ತರ ದಂಡು ಹರಿದುಬಂದು ದೇವರ ಕೃಪೆಗೆ ಪಾತ್ರರಾದರು. ರಥೋತ್ಸವದ ಮುಂಭಾಗದಲ್ಲಿ ಜಾಂಜ್ ಮೇಳ ಹಾಗೂ ಮಕ್ಕಳ ಮಕ್ಕಳು ಸೇರಿ ಮಹಿಳೆಯರು ಯುವಕರ ವಿಶೇಷ ಉಡುಗೆ ತೊಟ್ಟು ಜನರ ಗಮನಸೆಳೆದರು.‌

Tags:

error: Content is protected !!