61,000 ರೂ. ವ್ಲಾಗಿಂಗ್ ಕ್ಯಾಮರಾಗಾಗಿ ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಉದ್ಯಮಿಯೊಬ್ಬರಿಗೆ ಎರಡು ವಾಷಿಂಗ್ ಪೌಡರ್ ಪ್ಯಾಕೆಟ್ ಡೆಲಿವರಿ ಆಗಿರುವ ಘಟನೆ ಶನಿವಾರ ನಡೆದಿದೆ.

ಶಾರ್ಜಾದಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಲ್ಫ್ರೆಡ್ ಝೇವಿಯರ್ ಮಿರಾಂಡ ಅವರು ಕ್ಯಾಮರಾಗಾಗಿ ಅಮೆಜಾನ್ನಲ್ಲಿ ಆರ್ಡರ್ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್ನ ವಿಳಾಸಕ್ಕೆ ಶನಿವಾರ ಆಗಮಿಸಿದ ಕೊರಿಯರ್ ತೆರೆದು ನೋಡಿದಾಗ ವಾಷಿಂಗ್ ಪೌಡರ್ ಇರುವುದು ಗೊತ್ತಾಗಿದೆ. ವಂಚನೆಯ ಬಗ್ಗೆ ಉದ್ಯಮಿ ಅಲ್ಫ್ರೆಡ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
