BELAGAVI

ಬೆಳಗಾವಿಯ’ ಛತ್ರಪತಿ ಶಿವಾಜೀ ನಗರ’ದಲ್ಲಿಂದು ‘ವಿರಾಟ ಹಿಂದೂ ಸಮ್ಮೇಳನ’

Share

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಕೇಸರಿ ಕಳೆ ಕಟ್ಟಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಮಹೋತ್ಸವದ ಅಂಗವಾಗಿ ಛತ್ರಪತಿ ಶಿವಾಜಿ ನಗರದಲ್ಲಿ ಬೃಹತ್ ‘ವಿರಾಟ ಹಿಂದೂ ಸಮ್ಮೇಳನ’ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಂದವರು ಪಾಲ್ಗೊಳ್ಳುವಂತೆ ಶ್ರೀ ಹರಿಗುರು ಮಹಾರಾಜ್ ಮನವಿ ಮಾಡಿದ್ದಾರೆ.

ಬೆಳಗಾವಿ: ನಗರದ ಛತ್ರಪತಿ ಶಿವಾಜಿ ನಗರದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿರುವ ವಿರಾಟ ಹಿಂದೂ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಕುರಿತು ರುದ್ರಕೇಸರಿಮಠ ಸೇವಾ ಸಮಿತಿಯ ತೇಜ ಪ್ರತಿಬಿಂಬ ಪೀಠದ ಶ್ರೀ ಹರಿಗುರು ಮಹಾರಾಜ್ ಅವರು ಮಾತನಾಡುತ್ತಾ, ಹಿಂದೂ ಸಮಾಜದ ಏಕತೆ ಮತ್ತು ಸಂಘಟನೆಯ ಶಕ್ತಿಯನ್ನು ಜಗತ್ತಿಗೆ ತೋರಿಸಲು ಇದು ಸೂಕ್ತ ವೇದಿಕೆಯಾಗಿದೆ. ಭಾರತ ದೇಶದ ವೈಭವ ಮತ್ತು ವಿರಾಟ ಸ್ವರೂಪವನ್ನು ಸಾರಲು ದೇಶದ ಮೂಲೆ ಮೂಲೆಗಳಲ್ಲಿ ಇಂತಹ ಸಮ್ಮೇಳನಗಳು ನಡೆಯುತ್ತಿವೆ ಎಂದು ತಿಳಿಸಿದರು. ಇಂದು ಮಧ್ಯಾಹ್ನ 3 ಗಂಟೆಗೆ ಪಂಚವಟಿ ಸೋನ್ಯಾ ಮಾರುತಿ ದೇವಸ್ಥಾನದಿಂದ ಶಿವಾಜಿ ನಗರದ ಸಾಯಿ ಮಂದಿರದವರೆಗೆ ಭವ್ಯ ಶೋಭಾಯಾತ್ರೆ ಜರುಗಲಿದ್ದು, ಮಕ್ಕಳು ಮಹಾಪುರುಷರ ವೇಷಭೂಷಣಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಶಿವಾಜಿ ನಗರದ 27 ಸಂಖ್ಯೆಯ ಶಾಲಾ ಆವರಣದಲ್ಲಿ ವಿರಾಟ ಹಿಂದೂ ಸಮ್ಮೇಳನ ನಡೆಯಲಿದ್ದು, ಶ್ರೀ ಕೃಪಾನಂದ ಸ್ವಾಮೀಜಿಗಳ ಸಾನ್ನಿಧ್ಯ ಹಾಗೂ ಶ್ರೀ ರಾಮಚಂದ್ರ ಎಡಕೆ ಅವರ ದಿಕ್ಸೂಚಿ ಭಾಷಣದೊಂದಿಗೆ ಹಿಂದೂ ಸಂಘಟನೆಯ ಶಕ್ತಿ ಪ್ರದರ್ಶನವಾಗಲಿದೆ.

ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹಿಂದೂಗಳು ಒಂದಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಆರ್.ಎಸ್.ಎಸ್ ಶತಾಬ್ದಿ ಮಹೋತ್ಸವದ ಈ ಸಂಭ್ರಮದಲ್ಲಿ ಬೆಳಗಾವಿಯ ಜನತೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು. ಸಂಘಟನೆಯ ಮೂಲಕವೇ ಸದೃಢ ಭಾರತ ನಿರ್ಮಾಣ ಸಾಧ್ಯ ಎಂಬ ಆಶಯದೊಂದಿಗೆ ಇಂದು ಸಂಜೆ ಲಕ್ಷಾಂತರ ಭಕ್ತರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Tags:

error: Content is protected !!