Kagawad

ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದೇವತೆ ಶ್ರೀ ಬಸವಣ್ಣ ದೇವರ ಜಾತ್ರೆ ನಿಮಿತ್ಯ ರಥೋತ್ಸವ ಕಾರ್ಯಕ್ರಮ.

Share

11ನೇ ಶತಮಾನದ ಐತಿಹಾಸಿಕ ಹಿನ್ನೆಲೆ ಇರುವ ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದೇವರಾದ ಶ್ರೀ ಬಸವಣ್ಣಾ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ದಿನಾಂಕ ೨೨ರಂದು ಸಂಜೆ ಭವ್ಯ ರಥೋತ್ಸವ ಕಾರ್ಯಕ್ರಮ ಜರುಗಲಿದೆ. ಎಂದು ದೇವಸ್ಥಾನ ಸಮಿತಿಯ ಸಂಚಾಲಕ ಶೇಡಬಾಳ ಗ್ರಾಮದ ಗೌಡರಾದ ಸುನಿಲ್ ಪಾಟೀಲ್ ಹೇಳಿದರು.

ಪ್ರತಿ ವರ್ಷದಂತೆ ಈ ವರ್ಷವೂ ಶೇಡಬಾಳ ಪಟ್ಟಣದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವವು ಭಕ್ತಿಭಾವ ಹಾಗೂ ಸಂಪ್ರದಾಯದ ಸಡಗರದಲ್ಲಿ ಶಿವರಾತ್ರಿ ದಿನಾಂಕ ೧೫ ರಿಂದ ೨೬ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶನಿವಾರ ದಿನಾಂಕ ೨೧ರಂದು ಸಂಜೆ ೪ ಗಂಟೆಗೆ ದೇವಾಲಯದ ಆವರಣದಲ್ಲಿ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ಜರುಗಲಿದೆ.

ರವಿವಾರ ದಿನಾಂಕ ೨೨ರಂದು ಸಂಜೆ ೫ ಗಂಟೆಗೆ ಶ್ರೀ ಬಸವಣ್ಣ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ನಂತರ ಸಂಜೆ ೬ ಗಂಟೆಗೆ ಗ್ರಾಮದ ಗೌಡರ ಹಾಗೂ ಜತ್ರಾ ಕಮಿಟಿಯ ನೈತೃತವದಲ್ಲಿ ಸುಮಾರು ಮೂರು ಟನ್ ತೂಕದ ರಥವನ್ನು ಭಕ್ತರು ಕೈಯಿಂದ ಎಳೆಯುವ ಪವಿತ್ರ ರಥೋತ್ಸವ ಜರುಗಲಿದೆ. ಈ ಅಪರೂಪದ ಕ್ಷಣವನ್ನು ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಸೋಮವಾರ ದಿನಾಂಕ ೨೩ರಂದು ರಾತ್ರಿ ಸುಭಾಷ ಹಿಲಗೆ (ಆರ್ಕೆಸ್ಟ್ರಾ) ಅವರ ವೈಭವ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ.
ದಿನಾಂಕ ೨೪ರಂದು ರಾತ್ರಿ ಶ್ರೀ ಬಸವೇಶ್ವರ ನಾಟ್ಯ ಸಂಘ, ಬಂಡಿಗಣಿ ಇವರಿಂದ “ಗ್ರಾಮ ಪಂಚಾಯಿತಿ ಗಂಗವ್ವ” ನಾಟಕ ಪ್ರದರ್ಶನವಾಗಲಿದೆ. ಇದೇ ದಿನ ಬೆಳಿಗ್ಗೆ ಎತ್ತು ಹಿಡಿದು ಓಡುವ ಸ್ಪರ್ಧೆ ಕೂಡ ಜರುಗಲಿದೆ.
ಬುಧವಾರ ದಿನಾಂಕ ೨೫ರಂದು ಮುಂಜಾನೆ ೨ ಗಂಟೆಗೆ ಹಲ್ಲು ಮತ್ತು ಜನರಲ್ ಕುದುರೆ ಗಾಡಿ ಸ್ಪರ್ಧೆಗಳು ನಡೆಯಲಿದ್ದು, ರಾತ್ರಿ ಹಲಗಿ ವಾದ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆಯ ಸಡಗರವನ್ನು ಅನುಭವಿಸಿ ಪುಣ್ಯ ಸಂಪಾದನೆ ಮಾಡಬೇಕೆಂದು ದೇವಸ್ಥಾನ ಸಮಿತಿಯ ಪ್ರಮುಖರಾದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಅಶೋಕ್ ಪಾಟೀಲ್, ಅತಿಕ್ರಾಂತ ಪಾಟೀಲ್, ವರ್ಧಮಾನ್ ಪಾಟೀಲ್, ಸುನಿಲ್ ಪಾಟೀಲ್, ವಿನೋದ್ ಪಾಟೀಲ್ ಅಶ್ವಥ್ ಪಾಟೀಲ್, ಪದ್ಮವೀರ ಪಾಟೀಲ್,
ಅರುಣ ಶಿರದವಾಡೆ, ಅಶೋಕ ವಿಭೂತಿ. ಮಂದಿರದಲ್ಲಿ ಜರುಗಿದ ಸಮಾರಂಭದಲ್ಲಿ ಹೇಳಿದರು.

Tags:

error: Content is protected !!