ಬಾಗಲಕೋಟೆ ನಗರದಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆ ವೇಳೆ ಕಲ್ಲು ತುರಾಟ ನಡೆದಿದೆ. ಇದು ಹಿಂದೂಗಳು ಮನಸ್ಥಿತಿಗೆ ದಕ್ಕೆ ತಂದಿದೆ. ರಾಜ್ಯ ಕಾಂಗ್ರೆಸ್ ಸರ್ಕಾದಿಂದಲೇ ಹಿಂತಹ ಹೀನ ಕೃತ್ಯ ನಡೆದಿದೆ ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲೀಕ್ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ ಶಿವಾಜಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಸೀದಿ ಹತ್ತಿರ ಮೆರವಣಿಗೆ ಬಂದ ತಕ್ಷಣ ಚಪ್ಪಲಿ ಎಸಿತಾರೆ ಅಂದ್ರೆ ಇದು ಹಿಂದೂಗಳ ಮೇಲೆ ಎಸದಂತೆ, ಒಬ್ಬ ಪೊಲೀಸ್ ವರಿಷ್ಟಧಿಕಾರಿ ಮೇಲೆ ಕೂಡಾ ಕಲ್ಲು ಎಸೆದಿದ್ದಾರೆ, ಇದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕಿಂದಲೇ ಹಿಂತಾ ಘಟನೆ ನಡೆದಿದೆ, ಇದಕ್ಕೆ ನೇರ ಹೊಣೆ ಕಾಂಗ್ರೆಸ್ ಸರ್ಕಾರ, ಈ ತರ ಕಲ್ಲು ಎಸೆಯೋ ಜಿಹಾದಿಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತಿದೆ. ಹಿಂದೂಗಳು ಸುಮ್ಮನೆ ಇರಬಾರದು ಅವರನ್ನ ಬಹಿಷ್ಕಾರ ಮಾಡಬೇಕು. ಹಿಂತಹ ಕೃತ್ಯ ಮಾಡಿದವರನ್ನ ಸರ್ಕಾರ ಸುಮ್ಮನೆ ಬಿಡಬಾರದು ಅವರಿಗೆ ತಕ್ಕ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು.
