Chikkodi

ಬೆಳ್ಳಂಬೆಳಗ್ಗೆ ಬೈಕ್ ಏರಿ ಪಟ್ಟಣದ ಸ್ವಚ್ಚತೆ ಪರಿಶೀಲಿಸಿದ ಎಸಿ-ತಹಶೀಹಲ್ದಾರ

Share

ಉಪವಿಭಾಗಧಿಕಾರಿ ಸುಭಾಷ ಸಂಪಗಾವಿ,ತಹಶಿಲ್ದಾರಾದ ಆದ ರಾಜೇಶ ಬುರ್ಲಿ ಅವರು ಬೈಕ್ ಮೇಲಿಂದ ಚಿಕ್ಕೋಡಿ ಪಟ್ಟಣದ ವಿವಿಧ ಬಡಾವಣೆಗಳಿಗೆ ಮತ್ತು ಮಾರುಕಟ್ಟೆ, ಬೀದಿಗಳಿಗೆ ತೆರಳಿ, ಅಲ್ಲಿಯ ಸ್ವಚ್ಚತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಜನ ಸಾಮಾನ್ಯರನ್ನು ಸಂಪರ್ಕಿಸಿ ಅವರ ಅನಿಸಿಕೆಗಳನ್ನು ಕಲೆ ಹಾಕಿ, ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಿದರು.
ಸಾರ್ವಜನಿಕ ಆಸ್ಪತ್ರೆಗೆ ಮತ್ತು ತಾಯಿ-ಮಕ್ಕಳ ಆಸ್ಪತ್ರೆಗೆ ಭೆಟ್ಟಿ ನೀಡಿ ರೋಗಿಗಳೊಂದಿಗೆ ಕೆಲ ಸಮಯ ಕಳೆದು ಅಲ್ಲಿಯ ವ್ಯವಸ್ಥೆಯ ಕುರಿತು ವೈದ್ಯಾಧಿಕಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಇವರು ಧಿಡೀರನೆ ಪಟ್ಟಣದಲ್ಲಿ ಸಂಚರಿಸಿರುವ ವಿಷಯ ತಿಳಿದ ಕೆಲ ಅಧಿಕಾರಿಗಳಲ್ಲಿ ಎಚ್ಚರಿಕೆ ಮೂಡಿದಿದೆ. ಪಟ್ಟಣ ಸಂಚಾರದ ಹಿಂದೆ ವ್ಯವಸ್ಥೆಯ ಬದಲಾವಣೆ ನಿಶ್ಚಿತ ಎಂಬ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.

Tags:

error: Content is protected !!