Vijaypura

ದೇವರಹಿಪ್ಪರಗಿಯಲ್ಲಿ ಪತ್ನಿಯ ಬರ್ಬರ ಹತ್ಯೆ. 24 ದಿನಗಳ ಬಳಿಕ ಪ್ರಕರಣ ಬಯಲು

Share

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿ ಮನೆಯ ಅಂಗಳದಲ್ಲೇ ಹೂತುಹಾಕಿದ್ದ ಘಟನೆ 24 ದಿನಗಳ ನಂತರ ಬೆಳಕಿಗೆ ಬಂದಿದೆ.

ಹತ್ಯೆಯಾದ ಪತ್ನಿಯನ್ನು ಸರೋಜಿನಿ ರತ್ನಾಕರ (45) ಎಂದು ಗುರುತಿಸಲಾಗಿದ್ದು, ಆರೋಪಿಯಾಗಿ ಪತಿ ಪ್ರಭು ರತ್ನಾಕರ (46) ಬಂಧನಕ್ಕೊಳಗಾಗಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಪ್ರಭು ರತ್ನಾಕರ ತನ್ನ ಪತ್ನಿ ಸರೋಜಿನಿ ಹೆಸರಿನಲ್ಲಿ ಹೆಚ್ಚಿನ ಸಾಲ ಮಾಡಿದ್ದನು. ಸಾಲದ ವಿಚಾರವಾಗಿ ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಜನವರಿ 23ರಂದು ರಾತ್ರಿ ನಡೆದ ಜಗಳ ತಾರಕಕ್ಕೇರಿದ್ದು, ಜನವರಿ 24ರಂದು ಪ್ರಭು ರತ್ನಾಕರ ಪತ್ನಿಯ ತಲೆಗೆ ಹಾರಿಯಿಂದ ಹೊಡೆದು ಹತ್ಯೆ ಮಾಡಿದನು ಎನ್ನಲಾಗಿದೆ. ಬಳಿಕ ಶವವನ್ನು ಮನೆಯ ಅಂಗಳದಲ್ಲೇ ಹೂತುಹಾಕಿದ್ದಾನೆ ಎಂದು ತಿಳಿದುಬಂದಿದೆ.
ಇದರ ನಡುವೆ ಫೆಬ್ರವರಿ 2ರಂದು ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ಪ್ರಭು ರತ್ನಾಕರನೇ ದೂರು ದಾಖಲಿಸಿದ್ದನು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಗಂಡನ ನಡೆ-ನುಡಿಗಳ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ, ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರಕರಣದ ವಿವರಗಳನ್ನು ನೀಡಿದರು. ಪ್ರಭು ತನ್ನ ಸಾಲ ತೀರಿಸಲು ಪತ್ನಿಯ ಚೆಕ್ ನೀಡಿದ್ದನು. ಆ ಚೆಕ್ ಬೌನ್ಸ್ ಆಗಿ ಅದರ ಸಂಬಂಧವೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಲದ ಒತ್ತಡ ಮತ್ತು ದಾಂಪತ್ಯ ಕಲಹವೇ ಕೊಲೆಗೆ ಕಾರಣವಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅವರು ಹೇಳಿದರು.
ಸರೋಜಿನಿ ಅವರ ತಾಯಿ ಕಮಲವ್ವ ಮೇಲಿನಿ ನೀಡಿದ ದೂರಿನ ಆಧಾರದ ಮೇಲೆ ಪ್ರಭು ವಿರುದ್ಧ ಪ್ರಕರಣ ದಾಖಲಾಗಿದ್ದು, ದೇವರಹಿಪ್ಪರಗಿ ಪೊಲೀಸರು ಶವವನ್ನು ಹೊರತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ

Tags:

error: Content is protected !!