ಬೆಳಗಾವಿ ಜನರಿಗೆ ಅತ್ಯಾಧುನಿಕ ಯಂತ್ರೋಪಕರಣ ಜಂಬಗಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಫೆ.22 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಜಂಬಗಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಜಂಬಗಿ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದರು. ರೋಗ ನಿರ್ಣಯದ ನಿಖರತೆ ಹಾಗೂ ಕ್ಲಿನಿಕಲ್ ಫಲಿತಾಂಶಗಳ ಸುಧಾರಿಸುವ ಗುರಿಯೊಂದಿಗೆ ಅತ್ಯಾಧುನಿಕ ರೋಗ ನಿರ್ಣಯ ಹಾಗೂ ಶಸ್ತ್ರ ಚಿಕಿತ್ಸಾ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನೆರವೇರಿಸುವದಕ್ಕಾಗಿ ರೋಬೋಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಕಾರ್ನಿಯಲ್ ಪ್ರಕ್ರಿಯೆಗಳಿಗಾಗಿ ಅತ್ಯಾಧುನಿಕ 90 ಎಕ್ಸೆಮರ್ ಲೇಸರ್ ಯಂತ್ರವನ್ನು ಅಳವಡಿಸಿಕೊಳ್ಳಲಾಗಿದೆ ಎಂದರು.
ಈ ತಂತ್ರಜ್ಞಾನವು ಆಯ್ದ ರೋಗಿಗಳ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದು ಕಡಿಮೆ ನೋವು ಪರಿಣಾಮಕಾರಿಯಾದ ಶಸ್ತ್ರಚಿಕಿತ್ಸೆ ಶೀಘ್ರುವು ದೃಶ್ಯವು ಮರುಕಳಿಸುವಲ್ಲಿ ಸಹಕಾರಿಯಾಗಿದೆ ಎಂದರು.
ಅತ್ಯಾಧುನಿಕ ರೋಬೋಟಿಕ್ ಹಾಗೂ ಲೇಸರ ಚಿಕಿತ್ಸೆಗಾಗಿ ಈ ಭಾಗದ ಜನರು ದೂರದ ನಗರಗಳಿಗೆ ಅಲೆದಾಡುವದನ್ನು ತಪ್ಪಿಸುವದಕ್ಕಾಗಿಯೇ ಬೆಳಗಾವಿ ನಗರದಲ್ಲಿ ಒಂದೇ ಸೂರಿನಡಿ ನೇತ್ರ ಸಂಬಂಧಿತ ಖಾಯಿಲೆಗಳಿಗೆ ಸಮಗ್ರವಾದ ಶಸ್ತ್ರಚಿಕಿತ್ಸೆ ಹಾಗೂ ಆರೈಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಡಾ. ವರ್ಷಾ ಜಂಬಗಿ, ಡಾ. ಅಮೋಘ ಜಂಬಗಿ, ಡಾ. ಹೇಮಂತ, ಡಾ. ಜಗದೀಶ್ ಪಾಟೀಲ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
