ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಕರ್ಲಹೊಂಡಲಿಂಗೇಶ್ವರ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗಿತು.


ಜಾತ್ರಾಮಹೋತ್ಸವ ಅಂಗವಾಗಿ ಕುಂಭಮೇಳ,ಸಕಲವಾದ್ಯಮೇಳದೊಂದಿಗೆ ಪಲ್ಲಕಿಯ ಉತ್ಸವ,ಗ್ರಾಮ ನೈವೇದ್ಯ ಹಾಗೂ ಮಹಾಪ್ರಸಾದ ಅತ್ಯಂತ ಉತ್ಸಾಹದಿಂದ ಜರುಗಿತು. ಶಾಹೀರಕಿ ಗಾನಾ (ಗೀ ಗೀ ಪದಗಳು) ಮನಸೂರಗೊಂಡವು.
ಜಾತ್ರೆಯ ಕೊನೆಯ ದಿನವಾದ ಇವತ್ತು ಕುದುರೆಗಾಡಿ ಶರ್ಯತ್ತು,ನವತರ ಜನರಲ್ ಕುದುರೆಗಾಡಿ ಶರ್ಯತ್ತು ಹಾಗೂ ಕೈಯಲ್ಲಿ ಎತ್ತು ಹಿಡಿದು ಓಡುವ ಶರ್ಯತ್ತುಗಳ ನೋಡಗರ ಗಮನಸೆಳೆದವು.ಜನರಲ್ ಕುದುರೆ ಗಾಡಿ ಶರ್ಯತಿನಲ್ಲಿ
ಪ್ರಮೋದ್ ಬಾಕಳೆ ಎಕ್ಸಂಬಾ ಪ್ರಥಮ,ಮಾಯಪ್ಪ ಪಾಟೀಲ್ ತೆರವಾಡ ದ್ವಿತೀಯ,ಅಮೋಲ ದಾನವಾಡ ತೃತಿಯ ಸ್ಥಾನ,
ನವತರ ಕುದುರೆ ಗಾಡಿ ಶರ್ಯತಿನಲ್ಲಿ
ಪ್ರಮೋದ್ ಬಾಕಳೆ ಯಕ್ಸಂಬಾ, ಪ್ರಥಮ
ಸಚಿನ ಮಾಳಿ ಯಕ್ಸಂಬಾ ದ್ವೀತಿಯ,
ಯಡೂರಿನ ಸಂಜು ಕೋಳಿಯವರಿಗೆ ಸೇರಿದ ಕುದುರೆಗಳಿಗೆ ತೃತಿಯ ಸ್ಥಾನ ಪಡೆದುಕೊಂಡರು ಹಾಗೂ ಕೈ ಯಲ್ಲಿ ಎತ್ತು ಹಿಡಿದು ಓಡುವ ಸ್ಪರ್ಧೆಯಲ್ಲಿ ಯಾದಗುಡ ಚಿಮಣ್ಯಾ ಪ್ರಥಮ
ಮಂಗನೂರು ಚಿಮಣ್ಯಾ ದ್ವೀತಿಯ ಹಾಗೂ ತೃತಿಯ ಸ್ಥಾನವನ್ನು
ಅಣ್ಣಪ್ಪ ಖೋತ ಯಾದನವಾಡಿಯವರು ಪಡೆದುಕೊಂಡರು. ಬಳಿಕ ವಿಜೇಯತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.ಭಕ್ತರ ಹರ್ಷಘ್ಧಾರದೊಂದಿಗೆ ಪಲ್ಲಕಿ ಉತ್ಸವ ಜತೆಗೆ ಜಾತ್ರೆಯ ಸಂಪನ್ನಗೊಂಡಿತ್ತು.

ಈ ಸಂದರ್ಭದಲ್ಲಿ ಆಶಿಶ ಹುಕ್ಕೇರಿ , ಪುಂಡಲಿಕ್ ಹಿಟ್ನೆ, ಸುರೇಂದ್ರ ಕಬಾಡೆ, ರವಿ ಹಿಟನ್ನೇ , ಸಚಿನ ಮಾನೆ , ಕೆದಾರಿ ಗಿಡ್ಡ, ಬಾಬು ಬಾಕಳೆ, ಪಂಡಿತ ಜಾಧವ, ರಾಜು ಸಲಗರೆ , ಪುಂಡಲಿಕ ಸಾತ್ವರ,ಮಲ್ಲಪ್ಪ ಕಬಾಡೆ, ಉಮೇಶ ಕಲ್ಯಾಣಿ ,ಸತೀಶ್ ಕಬಾಡೆ, ಧರಿ ಖೋತ,ಕಾರ್ಯದರ್ಶಿ ರಮೇಶ ಕಮ್ಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
