ಚಿಕ್ಕೋಡಿ ಪಟ್ಟಣದ ಪ್ರಭುವಾಡಿಯಲ್ಲಿ ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಪ್ರಾರಂಭದಲ್ಲಿ ಗಣ್ಯರು ಸೇರಿಕೊಂಡು ಛತ್ರಿಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾರ್ಲಾಪಣೆಯನ್ನು ಮಾಡಿದರು.ಬಳಿಕ ಕಾರ್ಯಕ್ರಮ ಉದ್ದೇಶಿಸಿ ಎಸಿ ಸುಭಾಷ ಸಂಪಗಾವಿ,ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ,ಮರಾಠಾ ಸಮಾಜದ ಮುಖಂಡರಾದ ರಾಮಾ ಮಾನೆ,ಬಿ.ಆರ್.ಯಾದವಯವರುಮಾತನಾಡಿ ಛತ್ರಿಪತಿ ಶಿವಾಜಿ ಮಹಾರಾಜರು ಧ್ಯರ್ಯಶೀಲ,ವಾಗ್ಮೀ,ಪರಾಕ್ರಮಿಶಾಲಿಯಾಗಿದ್ದರು.ಸಮಾಧನವಾಗಿ,ವಿಚಾರಿಸಿ ಮುನ್ನಡೆಯುವ ವ್ಯಕ್ತಿತ್ವವನ್ನು ಹೊಂದಿದ್ದರು.ಶಿವಾಜಿ ಮಹಾರಾಜರು ಮುಸ್ಲಿಂರ ವಿರೋಧಿವಾಗಿರಲಿಲ್ಲ.ಒಂದೇ ಸಮಾಜಕ್ಕೆ ಸೀಮಿತವಾಗಿರಲಿಲ್ಲ.ಅವರ ಸೈನ್ಯದಲ್ಲಿ ಎಲ್ಲ ಧರ್ಮ,ಜಾತಿಯ ಸೈನಿಕರು ಇದ್ದರು.ಛತ್ರಿಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಮುಂದಿನ ವರ್ಷ ಪ್ರಬಂದ,ಕ್ವಿಜ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಗಣ್ಯರು ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ,ರಾಮಾ ಮಾನೆ,ಅನೀಲ ಮಾನೆ, ಬಿ.ಆರ.ಯಾದವ,ಜ್ಯೋತಿಬಾ ಖಾಮಕರ,ಅನೀಲ ಯಾದವ,ನಿವೃತ್ತಿ ಮಾನೆ,ವಿಠ್ಠಲ ಜಾಧವ,ಸುರೇಶ ಜಾಧವ,ಸಚಿನ ಮಾನೆ,ದತ್ತು ಭೋಸಲೆ,ಅಪ್ಪಾ ಖಾಮಕರ,ಧನಾಜಿ ಜವಾನ,ಶಬ್ಬಿರ ದಾನವಾಡೆ ಸೇರಿದಂತೆ ಇನ್ನಿತರರು ಉಪಸ್ಥಿತಿರಿದ್ದರು.
