ಕುಶನ್ ವರ್ಕ ಅಂಗಡಿಗೆ ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿದಿರುವ ಪರಿಣಾಮ ಅಂಗಡಿಯಲ್ಲಿದ್ದ ಬಹುತೇಕ ಕುಶಮ್ ಸಾಮಗ್ರಿಗಳು ಸುಟ್ಟುಕರಕಲಾದ ಘಟನೆ ಧಾರವಾಡದಲ್ಲಿ ಕಳೆದ ದಿನ ತಡ ರಾತ್ರಿ ಹಳಿಯಾಳ ನಾಕಾ ಬಳಿ ನಡೆದಿದ್ದು, ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯದಿಂದ ಬಾರಿ ಅನಾಹುತ ತಪ್ಪಿದೆ.

ಧಾರವಾಡದ ಹಳಿಯಾಳ ನಾಕಾ ಟಿವಿ ಟವರ್ ಬಳಿಯ ಕರ್ನಾಟಕ ಕುಶನ್ ವರ್ಕ್ ಶಾಪ್’ನಲ್ಲಿ ಈ ಅಗ್ನಿ ಅವಘಡ ನಡೆದಿದೆ. ಮುಜ್ಜಾಮಿಲ್ ಎಂಬವರಿಗೆ ಸೇರಿದ ಶಾಪ ಇದ್ದಾಗಿದ್ದು, ಅಂಗಡಿ ಬಂದ್ ಇದ್ದ ವೇಳೆ ತಡ ರಾತ್ರಿ ಅಂಗಡಿಯಲ್ಲಿ ಮೊದಲಿಗೆ ಹೊಗೆ ಕಾಣಿಸಿಕೊಂಡಿದೆ. ಸಮಯ ಕಳೆಯುತ್ತಿದಂತೆ ಹೊಗೆ ಜತೆಗೆ ಬೆಂಕಿಕಾಣಿಸಿಕೊಂಡ ಕೂಡಲೇ ಸ್ಥಳೀಯರು ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅಂಗಡಿ ಅಕ್ಕ ಪಕ್ಕದ ಹೋಟೆಲ್ ಸೇರಿದಂತೆ ಇನ್ನಿತರ ಶಾಪಗಳಿದ್ದು, ಬೆಂಕಿ ಅವುಗಳಿಗೆ ವ್ಯಾಪಿಸುವ ಮುನ್ನವೆ ಬೆಂಕಿ ನಂದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಬೆಂಕಿಯಿಂದ ಅಂಗಡಿಯಲ್ಲಿ ಹಾನಿಯಾದ ಕುರಿತು ಪೊಲೀಸ್ ಪ್ರಾಥಮಿಕತನಿಖೆಯ ಬಳಿಕ ತಿಳಿದು ಬರಬೆರಕಾಗಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
