Hukkeri

ಹುಕ್ಕೇರಿ : ವಿದ್ಯುತ್ ಅವಘಡ ಲಕ್ಷಾಂತರ ರೂಪಾಯಿ ವಿದ್ಯುತ್ ಪರಿಕರಗಳು ಬೆಂಕಿಗಾಹುತಿ

Share

ಹುಕ್ಕೇರಿ ನಗರದ ವಿದ್ಯುತ್ ಸಹಕಾರಿ ಸಂಘದ ವರ್ಕಶಾಪ್ ದಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ಜರುಗಿದೆ.

ಇಂದು ಮದ್ಯಾಹ್ನ ಎರಡು ಘಂಟೆಗೆ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಮುಖ್ಯ ಕಛೇರಿಯ ವಿದ್ಯುತ್ ಪರಿಕರಗಳ ದುರಸ್ತಿ ಸ್ಥಳದಲ್ಲಿ ಹಠಾತ್ ವಿದ್ಯುತ್ ಅವಘಡ ಸಂಭವಿಸಿದೆ ಕೂಡಲೆ ಕಾರ್ಮಿಕರು ಮತ್ತು ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದರು ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಸಫಲತೆ ಕಂಡಿದೆ, ನಂತರ ವಿದ್ಯುತ್ ಸಹಕಾರಿ ಸಂಘಧ ಅದ್ಯಕ್ಷ ಮಹಾವೀರ ನಿಲಜಗಿ ಹಾಗೂ ವ್ಯವಸ್ಥಾಪಕ ನಿರ್ದೆಶಕ ಪೂಜಾರಿ ಸ್ಥಳಕ್ಕೆ ಆಗಮಿಸಿ ಅಗ್ನ ಅವಘಡದ ಬಗ್ಗೆ ಮಾಹಿತಿ ಪಡೆದುಕೊಂಡರು.


ಬೆಂಕಿಯಲ್ಲಿ ಲಕ್ಷಾಂತರ ರೂಪಾಯಿ ಪರಿಕರಗಳು ಸುಟ್ಟು ಕರಕಲಾಗಿವೆ ಎನ್ನಲಾಗುತ್ತಿದೆ.

Tags:

error: Content is protected !!